ಕರ್ನಾಟಕ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಯೋಜನೆ

Pinterest LinkedIn Tumblr

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರೋ ಕಾಂಗ್ರೆಸ್​ ಪಾತಾಳ ಸೇರಿದೆ. ಕೇವಲ ಒಂದೇ ಒಂದು ಸೀಟ್​ ಗೆದ್ದಿರೋ ಕಾಂಗ್ರೆಸ್​ ಕುಗ್ಗಿ ಹೋಗಿದೆ.

ಪಕ್ಷವನ್ನು ಮತ್ತೆ ಪುಟಿದೇಳುವಂತೆ ಮಾಡೋಕೆ ಎಐಸಿಸಿ ಅಧ್ಯಕ್ಷ ರಾಹುಲ್ ಮುಂದಾಗಿದ್ದಾರೆ. ಇದರ ಮೊದಲ ಭಾಗವಾಗಿಯೇ ಎಲ್ಲಾ ರಾಜ್ಯಗಳ ಕೆಪಿಸಿಸಿ ಅಧ್ಯಕ್ಷರನ್ನ ಬದಲಾವಣೆ ಮಾಡೋದು. ನಂತರ ವಿವಿಧ ಘಟಕಗಳ ಪದಾಧಿಕಾರಿಗಳನ್ನ ಚೇಂಜ್ ಮಾಡೋ ಮಾಸ್ಟರ್​ ಪ್ಲಾನ್​ ಮಾಡಿದ್ದಾರಂತೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಮೇಲೂ ತೂಗುಗತ್ತಿ ನೇತಾಡ್ತಿದೆ. ಇದೇ ಜಾಗಕ್ಕೆ ಲಿಂಗಾಯತ ಸಮುದಾಯದ ಎಂಬಿ ಪಾಟೀಲ್ ಅಥವಾ ಒಕ್ಕಲಿಗ ಸಮುದಾಯದ ಡಿ. ಕೆ ಶಿವಕುಮಾರ್​ನ್ನ ತಂದು ಕೂರಿಸೋಕೆ ಸ್ಕೆಚ್​ ಹಾಕಿದ್ದಾರಂತೆ.

ಲಿಂಗಾಯತ ನಾಯಕರಲ್ಲಿ ಎಂಬಿ ಪಾಟೀಲ್​ ಹೆಸರು ಮುಂಚೂಣಿಯಲ್ಲಿದೆ. ಆದರೆ, ಎಂಬಿಪಿ ಮಾತ್ರ ಇದಕ್ಕೆ ಸುತಾರಾಂ ಒಪ್ತಿಲ್ವಂತೆ. ಬೇಕಿದರೆ ಇರೋ ಸಚಿವ ಸ್ಥಾನವನ್ನೂ ಬಿಡ್ತೀನಿ, ಆದರೆ, ಕೆಪಿಸಿಸಿ ಅಧ್ಯಕ್ಷ ಹುದ್ದೆ ಮಾತ್ರ ಬೇಡ ಅಂತಾ ದೂರ ಹೋಕ್ತಿದ್ದಾರಂತೆ. ಹೀಗಾಗಿ ಹೈಕಮಾಂಡ್​ ಕಣ್ಣು ಡಿಕೆಶಿ ಮೇಲೆ ಬಿದ್ದಿದೆ. ಒಂದು ವೇಳೆ ಮಧ್ಯಂತರ ಚುನಾವಣೆ ನಡೆದರು ಅದನ್ನ ಟ್ರಬಲ್​ ಶೂಟರ್​ ಯಶಸ್ವಿಯಾಗಿ ನಿಬಾಯಿಸ್ತಾರೆ ಅನ್ನೋ ಪ್ಲಾನ್​ ಮಾಡ್ಕೊಂಡಿದೆ. ಇದು ಸಿದ್ದುಗೆ ಗೊತ್ತಾಕ್ತಿದ್ದಂತೆ ಸೀದಾ ದೆಹಲಿಗೆ ಹಾರಿದ್ದಾರೆ. ಎಲ್ಲಿ ಡಿಕೆಶಿಗೆ ಸಾರಥ್ಯ ವಹಿಸಿದರೆ ನನ್ನ ಸಿಎಂ ಕನಸಿಗೆ ಪೆಟ್ಟು ಬೀಳುತ್ತೋ ಅಂತ ಕೈ ಘಟಾನುಘಟಿ ನಾಯಕರನ್ನು ಭೇಟಿ ಮಾಡಿದ್ದಾರೆ. ಒಂದು ವೇಳೆ ದಿನೇಶ್​ ಬದಲಿಸಿದ್ರೆ, ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯಾಗಲಿದೆ. ಚುನಾವಣೆ ಬಂದಾಗ ನೋಡಿದ್ರೆ ಆಯ್ತು ಅಂತಾ ಮನವರಿಕೆ ಮಾಡಿದ್ದಾರಂತೆ.

ಇನ್ನು ರಾಜ್ಯದ ಮಟ್ಟಿಗೆ ವಿವಿಧ ಘಟಕಗಳ ಕಾಂಗ್ರೆಸ್​ ಪದಾಧಿಕಾರಿಗಳ ಬದಲಾವಣೆ ಬಗ್ಗೆ ಸಿದ್ದು ಹಾಗೂ ಡಿಸಿಎಂ ಪರಮೇಶ್ವರ್ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ. ಚುನಾವಣೆಯಲ್ಲಿ ಕೆಲಸ ಮಾಡದವರನ್ನು ಕೆಳಗಿಳಿಸಿ ಪಕ್ಷಕ್ಕೆ ನಿಷ್ಟೆಯಿರುವ ಹಾಗೂ ಸಂಘಟನೆಯಲ್ಲಿ ಗುರ್ತಿಸಿಕೊಂಡಿರುವ ಮುಖಂಡರಿಗೆ ಸ್ಥಾನ ಮಾನ ನೀಡೋಣ ಅನ್ನೋ ಸಲಹೆ ಮುಂದಿಟ್ಟಿದ್ದಾರಂತೆ. ಹೈಕಮಾಂಡ್​ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ಯಂತೆ.

ಸಿದ್ದರಾಮಯ್ಯ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ. ಶಿಷ್ಯನ ಸ್ಥಾನವನ್ನೂ ಭದ್ರಗೊಳಿಸಿದ್ದಾರೆ, ಜೊತೆಗೆ ತಮ್ಮ ಸಿಎಂ ಆಸೆಯನ್ನೂ ಜೀವಂತವಾಗಿಸಿಕೊಂಡಿದ್ದಾರೆ. ಸದ್ಯಕ್ಕಂತೂ ದಿನೇಶ್​ ಗೂಂಡೂರಾವ್​ ಬೀಸೋ ದೊಣ್ಣೆಯಿಂದ ಬಚಾವ್​ ಆಗಿದ್ದಾರೆ.

Comments are closed.