ಕರ್ನಾಟಕ

ತಲೆನೋವಾದ ಸಚಿವ ಸಂಪುಟ ವಿಸ್ತರಣೆ: ಕುಮಾರಸ್ವಾಮಿ-ದೇವೇಗೌಡರಿಂದ ಮಹತ್ವದ ಸಭೆ

Pinterest LinkedIn Tumblr


ಬೆಂಗಳೂರು (ಜೂ.9): ಬುಧವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಅದಕ್ಕೂ ಮೊದಲು ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಪದ್ಮನಾಭ ನಗರದ ನಿವಾಸದಲ್ಲಿ ಜೆಡಿಎಸ್​ ಹಿರಿಯ ನಾಯಕ ಎಚ್​ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಇಂದಿನ ಸಭೆ ವೇಳೆ ಖಾಲಿ ಇರುವ ಸಚಿವ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಸದ್ಯ ಜೆಡಿಎಸ್​ನಲ್ಲಿ ಎರಡು ಖಾತೆಗಳು ಖಾಲಿ ಇವೆ. ಅದರಲ್ಲಿ ಒಂದು ಸ್ಥಾನವನ್ನು ಈಗಾಗಲೇ ಪಕ್ಷೇತರ ಶಾಸಕರಿಗೆ ಕೊಡಲು ತೀರ್ಮಾನ ಮಾಡಲಾಗಿದೆ. ಇನ್ನುಳಿದ ಒಂದು ಸ್ಥಾನ ಯಾರಿಗೆ ಹಂಚಬೇಕು ಎನ್ನುವದರ ಬಗ್ಗೆ ಚರ್ಚೆ ನಡೆಸಲಾಗಿದೆ.

ಜೆಡಿಎಸ್​ನಲ್ಲಿ ಹೆಚ್ಚು ಜನ ಆಕಾಂಕ್ಷಿಗಳು ಇರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಶಾಸಕರಾದ ಎಚ್​.ಕೆ. ಕುಮಾರಸ್ವಾಮಿ, ಅನ್ನದಾನಿ, ಸತ್ಯ ನಾರಾಯಣ, ಹೆಚ್.ವಿಶ್ವನಾಥ್ ಸೇರಿ ಸಚಿವ ಸ್ಥಾನ ಆಕಾಂಕ್ಷಿಗಳು. ಇವರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಜೆಡಿಎಸ್​ ನಾಯಕರಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಸದ್ಯ ಈ ಒಂದು ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯದ ನಾಯಕ ಬಿ ಎಂ ಫಾರೂಕ್ ಹೆಸರು ಪ್ರಬಲವಾಗಿ ಹೆಸರು ಕೇಳಿ ಬರುತ್ತಿದೆ. ಮತ್ತೊಂದೆಡೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ತೊರೆದಿರುವ ವಿಶ್ವನಾಥ್​ಗೆ ಸಚಿವ ಸ್ಥಾನ ನೀಡಲೇಬೇಕಾದರ ಅನಿವಾರ್ಯತೆ ತಲೆದೂರಿದೆ. ಹೀಗಾಗಿ ವಿಶ್ವನಾಥ್​ಗೆ ಸಚಿವ ಸ್ಥಾನ ನೀಡುವುದಾ ಅಥವಾ ಫಾರೂಕ್​ಗೆ ಸಚಿವ ಸ್ಥಾನ ನೀಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬುದು ಮೂಲಗಳ ಮಾಹಿತಿ.

Comments are closed.