ಕರ್ನಾಟಕ

ಕಲ್ಬುರ್ಗಿ ಹತ್ಯೆ ಪ್ರಕರಣ: ಮಂಗಳೂರಿನತ್ತ ಎಸ್​​ಐಟಿ ಅಧಿಕಾರಿಗಳು

Pinterest LinkedIn Tumblr


ಬೆಂಗಳೂರು: ವಿಚಾರವಾದಿ ಪ್ರೊ. ಎಂ.ಎಂ ಕಲ್ಬುರ್ಗಿ ಹತ್ಯೆ ಪ್ರಕರಣ ಇತ್ತೀಚೆಗೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹತ್ಯೆ ಮಾಡಿದ್ದ ಆರೋಪಿಗಳು ಮಂಗಳೂರಿನಲ್ಲಿ ತರಬೇತಿ ಪಡೆದಿದ್ದರು ಎಂಬ ಮಾಹಿತಿ ಎಸ್​ಐಟಿ ತಂಡಕ್ಕೆ ಲಭ್ಯವಾಗಿದೆ. ಈ ಬೆನ್ನಲ್ಲೀಗ ತನಿಖೆ ಚುರುಗೊಳಿಸಿರುವ ಎಸ್​ಐಟಿ ಮಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.

ಆರೋಪಿಗಳಿಗೆ ತರಬೇತಿ ನೀಡಿದವರು ಯಾರು? ಎಂಬುದನ್ನು ಪತ್ತೆ ಹಚ್ಚಲು ಎಸ್​ಐಟಿ ಮಂಗಳೂರಿಗೆ ತೆರಳಲಿದೆ. ಪ್ರಕರಣದ ಕಾವು ದಿನೇದಿನೇ ಹೆಚ್ಚಾಗುತ್ತಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆಗೆ ಮುಂದಾಗಿದ್ಧಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಗೆ ಬಳಸಿದ್ದ ಬೈಕ್ ಯಾರಿಗೆ ಸೇರಿದ್ದು ಎಂಬ ಮಾಹಿತಿ ಸಿಕ್ಕಿದೆ. ಈ ಸಂಬಂಧ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಮೊರಬ ಗ್ರಾಮದ ರೈತನಿಗೆ ಸೇರಿದ್ದಾಗಿದೆ.

ಹಲವು ವರ್ಷಗಳಿಂದ ಕಲ್ಬುರ್ಗಿ ಹತ್ಯೆಯ ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದರು. ಕಲ್ಬುರ್ಗಿ ಹತ್ಯೆ ವೇಳೆ ಬೈಕ್ ಚಾಲನೆ ಮಾಡಿದವನ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಅಮೋಲ್ ಕಾಳೆಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಿದಾಗ ಕೃಷ್ಣಮೂರ್ತಿ ಬಗ್ಗೆ ಮಾಹಿತಿ ನೀಡಿದ್ದ. ಹೀಗಾಗಿ ಹುಬ್ಬಳ್ಳಿಗೆ ತೆರಳಿದ್ದ ಎಸ್​ಐಟಿ ತಂಡ ಆರೋಪಿ ಕೃಷ್ಣಮೂರ್ತಿ ಬಂಧಿಸಿತ್ತು.

ಬೈಕ್ ಪತ್ತೆಯಾಗಿದ್ದು ಹೇಗೆ?: ಕಲಬುರ್ಗಿ ಹತ್ಯೆಗೂ 2 ತಿಂಗಳ ಮುಂಚೆಯೇ ಈ ಬೈಕ್ ಕದ್ದು ಬೆಳಗಾವಿಯಲ್ಲಿ ಇಡಲಾಗಿತ್ತು ಎನ್ನಲಾಗಿದೆ. ಆಗ ಎಂಎಚ್ ಎಂದು ನಂಬರ್ ಪ್ಲೇಟ್ ಬದಲಾಯಿಸಲಾಗಿತ್ತು. ಹಂತಕರು ಆ. 30, 2015ರಲ್ಲಿ ಕಲಬುರ್ಗಿ ಹತ್ಯೆ ಮಾಡಿ ಬೈಕ್‍ನ್ನು ಕಿತ್ತೂರಿನಲ್ಲಿ ಬಿಟ್ಟು ಪರಾರಿಯಾಗಿದ್ದರು.

ನಂತರ ಬೇರೆ ವ್ಯಕ್ತಿ ಆ ಬೈಕ್ ತೆಗೆದುಕೊಂಡು ಪುಣೆಗೆ ಹೋಗಿದ್ದ. ಅಲ್ಲಿ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲೂ ಆರೋಪಿಗಳು ಇದೇ ಬೈಕ್ ಬಳಸಿದ್ದರು. ನಂತರ ಎಟಿಎಸ್ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಬೈಕ್ ಪತ್ತೆ ಆಗಿತ್ತು. ಬೈಕ್ ಚೆಸ್ಸಿ ನಂಬರ್ ನೋಡಿದಾಗ ಇದು ಧಾರವಾಡದ ಅಬ್ದುಲ್‍ ಕರಿಂಸಾಬ್‍ ಎಂಬುವವರಿಗೆ ಸೇರಿದ್ದು ಎಂಬುದು ಗೊತ್ತಾಗಿದೆ ಎನ್ನುತ್ತಿವೆ ಎಸ್‍ಐಟಿ ಮೂಲಗಳು.

Comments are closed.