ಕರ್ನಾಟಕ

ಮದುವೆಯಾಗಿ 11ನೇ ದಿನಕ್ಕೆ ನವ ವಿವಾಹಿತೆ ಆತ್ಮಹತ್ಯೆ!

Pinterest LinkedIn Tumblr


ದಾವಣಗೆರೆ: ಮದುವೆಯಾದ 11ನೇ ದಿನಕ್ಕೆ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಟಿಜೆ ನಗರದಲ್ಲಿ ನಡೆದಿದೆ.

ಶಿಲ್ಪಾ ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ. 11 ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಕೋಣುರು ಗ್ರಾಮದ ಶಿಲ್ಪಾ ಮದುವೆ ಅದೇ ಗ್ರಾಮದ ಮಂಜು ನಡೆದಿತ್ತು. ಒಬ್ಬರನ್ನೊಬ್ಬರು ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಪಡೆದು ಹಿರಿಯರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಮದುವೆ ಬಳಿಕ ದಾವಣಗೆರೆಯ ಕೆಟಿಜೆ ನಗರದಲ್ಲಿ ನವದಂಪತಿ ಹೊಸ ಬದುಕನ್ನು ಆರಂಭಿಸಿದ್ದರು.

ಕೆಟಿಜೆ ನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಶಿಲ್ಪಾ ಕೈ ಮೇಲೆ ಪೆನ್ನನಿಂದ ನಾಲ್ವರು ಹೆಸರನ್ನು ಬರೆದುಕೊಂಡಿದ್ದಾರೆ. ಕೈ ಮೇಲೆ ಪತಿ ಮಂಜು ಮತ್ತು ಆತನ ಸಂಬಂಧಿಕರಾದ ಕಲ್ಲೇಶ್, ಬಸಪ್ಪ ಹಾಗೂ ಸಂತೋಷ್ ಎಂಬವರ ಹೆಸರನ್ನು ಶಿಲ್ಪಾ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಶಿಲ್ಪಾ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಅಂತರ್ ಜಾತಿ ವಿವಾಹವಾಗಿದ್ದರಿಂದ ಶಿಲ್ಪಾರನ್ನು ಕೊಲೆ ಮಾಡಲಾಗಿದೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಸ್ಥಳೀಯರು ಮತ್ತು ಕುಟುಂಬಸ್ಥರಿಂದ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಘಟನೆ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Comments are closed.