ಕರ್ನಾಟಕ

ರಾಮನ ಹೆಸರಲ್ಲಿ ಸಂಗ್ರಹಿಸಿದ ಇಟ್ಟಿಗೆಯಲ್ಲಿ ಮನೆ ಕಟ್ಟಿಕೊಂಡ ಬಿಜೆಪಿ ನಾಯಕರು: ರೇವಣ್ಣ ಆರೋಪ

Pinterest LinkedIn Tumblr


ಹಾಸನ: ಬಿಜೆಪಿ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಇಷ್ಟು ದಿನ ರಾಮನ ಜಪ ಮಾಡುತ್ತಿದ್ದರು. ಈಗ ರಾಮನ ಹೆಸರಲ್ಲಿದ್ದ ಇಟ್ಟಿಗೆ ಎಲ್ಲಿ ಹೋಯ್ತು? ಎಂದು ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ ಪ್ರಶ್ನಿಸಿದ್ದಾರೆ.

ರಾಮ ಮಂದಿರ ಕಟ್ಟುತ್ತೇವೆಂದು ಸಂಗ್ರಹಿಸಿದ ಇಟ್ಟಿಗೆಗಳನ್ನೆಲ್ಲ ಬಳಸಿಕೊಂಡು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಮನೆ ಕಟ್ಟಿಕೊಂಡಿದ್ದಾರೆ. ಕಳೆದ ಐದು ವರ್ಷದಿಂದ ಮೋದಿ ಆಳ್ವಿಕೆಯಲ್ಲಿದ್ದಾರೆ. ಆದರೆ, ಹುತಾತ್ಮ ಸೈನಿಕರ ಕುಟುಂಬಕ್ಕೆ ಸೌಲಭ್ಯ ನೀಡುತ್ತಿಲ್ಲ. ರಾಜ್ಯ ಸರ್ಕಾರದಿಂದ 48 ಗಂಟೆಯಲ್ಲಿ ಹುತಾತ್ಮ ಸೈನಿಕರ ಕುಟುಂಬಕ್ಕೆ ಕೆಲಸ ಮತ್ತು ಸೌಕರ್ಯ ನೀಡಲು ಕ್ಯಾಬಿನೆಟ್​ನಲ್ಲಿ ತಿಳಿಸುತ್ತೇನೆ. ಮೋದಿ ಸರ್ಕಾರದ ಬದಲು ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಕಾರ್ಯವನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.

20 ಪರ್ಸೆಂಟ್ ಸರ್ಕಾರ ಯಡಿಯೂರಪ್ಪನವರದ್ದೇ ಹೊರತು ನಮ್ಮದಲ್ಲ. ಈಶ್ವರಪ್ಪ, ಜಗದೀಶ್​ ಶೆಟ್ಟರ್​ರದ್ದು ಕಮಿಷನ್ ವ್ಯವಹಾರ. ಪರ್ಸಂಟೇಜ್ ಏನೇ ಇದ್ದರೂ ಅವರನ್ನೇ ಕೇಳಬೇಕು. ಅವರ ಬಳಿಯೇ ಅಲ್ವಾ ದುಡ್ಡು ಎಣಿಸುವ ಮಷಿನ್ ಸಿಕ್ಕಿದ್ದು ಎಂದು ಮೋದಿ ಅವರು ಈ ಹಿಂದೆ ಹೇಳಿದ್ದ ರಾಜ್ಯ ಸರ್ಕಾರ ಕಮಿಷನ್ ಸರ್ಕಾರವಾಗಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Comments are closed.