ಕರ್ನಾಟಕ

ಮುಖ್ಯಮಂತ್ರಿ ವಾಸ್ತವ್ಯ ಹೂಡುತ್ತಿದ್ದ ಹೋಟೆಲ್ ಮೇಲೆ ಐಟಿ ದಾಳಿ

Pinterest LinkedIn Tumblr


ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಮತ್ತು ಮೖಸೂರಿಗೆ ಭೇಟಿ ನೀಡಿದಾಗಲೆಲ್ಲಾ ಹೆಚ್ಚು ವಾಸ್ತವ್ಯ ಹೂಡುತ್ತಿದ್ದ ರಾಯಲ್ ಆರ್ಕಿಡ್ ಹೋಟೆಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಇಂದು (ಗುರುವಾರ) ಮಧ್ಯಾಹ್ನ ಸುಮಾರು 25 ಜನರ ಐಟಿ ಅಧಿಕಾರಿಗಳ ತಂಡ KRS ಬೃಂದಾವನದಲ್ಲಿರುವ ಆರ್ಕಿಡ್ ಹೋಟೆಲ್ ದಾಳಿ ಮಾಡಿದ್ದು, ಕುಮಾರಸ್ವಾಮಿ ಉಳಿದುಕೊಳ್ಳುತ್ತಿದ್ದ ಕೊಠಡಿ ಸೇರಿದಂತೆ ಎಲ್ಲ ಕೊಠಡಿಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಕುಮಾರಸ್ವಾಮಿ ಅವರು ಮಂಡ್ಯ ಮತ್ತು ಮೖಸೂರಿಗೆ ಬಂದಾಗಲೆಲ್ಲಾಇದೇ ರಾಯಲ್ ಆರ್ಕಿಡ್ ಹೋಟೆಲ್ ಹಾಗೂ ಮೖಸೂರಿನ ಇನ್ಫೋಸಿಸ್ ನಲ್ಲಿ ಹೆಚ್ಚಾಗಿ ಉಳಿದುಕೊಳ್ಳುತ್ತಿದ್ದರು.

ಅಷ್ಟೇ ಅಲ್ಲದೇ ಜೆಡಿಎಸ್ ಸಚಿವರು, ಶಾಸಕರು ಹಾಗೂ ಪ್ರಮುಖ ಮುಖಂಡರ ಸಭೆಯನ್ನೂ ಇದೇ ಹೋಟೆಲ್ ನಲ್ಲಿ ನಡೆಸಿ, ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಹೋಟೆಲ್ ನಲ್ಲಿ ಹಣದ ವ್ಯವಹಾರ ನಡೆದಿರುವ ಸಾಧ್ಯತೆಯ ಅನುಮಾನದ ಮೇರೆಗೆ ಐಟಿ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ.

Comments are closed.