ಕರ್ನಾಟಕ

ಜಿಲ್ಲಾಧಿಕಾರಿಯ ಸ್ಥಾನದಿಂದ ಅಧಿಕಾರ ಹಸ್ತಾಂತರಕ್ಕೆ ಬಾರದೇ ಅಸಮಾಧಾನ ಹೊರಹಾಕಿದ ರೋಹಿಣಿ ಸಿಂಧೂರಿ

Pinterest LinkedIn Tumblr


ಹಾಸನ: ದಕ್ಷ ಐಎಎಸ್ ಅಧಿಕಾರಿ ಎಂದೇ ಜನಜನಿತರಾಗಿರುವ ​ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದಶಿಯಾಗಿ ಸಿಂಧೂರಿ ಅವರನ್ನ ನಿಯೋಜನೆ ಮಾಡಲಾಗಿದೆ.

2017 ಜುಲೈ 14 ರಿಂದ ಹಾಸನ ಜಿಲ್ಲಾಧಿಕಾರಿಯಾಗಿ ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದರು. ಇದೀಗ ಎತ್ತಂಗಡಿ ಮಾಡಿರುವುದು ರೋಹಿಣಿ ಸಿಂಧೂರಿ ಬೇಸರಗೊಂಡಿದ್ದಾರೆ.

ಅಸಮಾಧಾನಗೊಂಡಿರುವ ರೋಹಿಣಿ ಸಿಂಧೂರಿ ಹಾಸನ ನೂತನ ಡಿಸಿ ಅಕ್ರಂ ಪಾಷಾ ಅವರಿಗೆ ಅಧಿಕಾರ ಹಸ್ತಾಂತರಿಸಲು ಕಚೇರಿಗೆ ಹೋಗಿಲ್ಲ. ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಅವರು ನೂತನ ಡಿಸಿ ಅಕ್ರಂ ಪಾಷಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಕೆಲ ದಿನಗಳ ಹಿಂದೆ ಅಷ್ಟೇ ಸಚಿವ ಎಚ್.ಡಿ.ರೇವಣ್ಣ ಬೆಂಬಲಿಗರು ಅರೆಕೆರೆಯಲ್ಲಿಅಕ್ರಮವಾಗಿ ಮರಳು ಸಂಗ್ರಹಿಸಿಟ್ಟಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ರೋಹಿಣಿ ಸಿಂಧೂರಿ ದಾಳಿ ಮಾಡಿ ಸುಮಾರು 9000 ಟನ್ ಅಕ್ರಮ ದಾಸ್ತಾನು ಮರಳು ಜಪ್ತಿ ಮಾಡಿದ್ದರು.

ಈ ಪ್ರಕರಣದಲ್ಲಿ ಹಾಸನ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸೇರಿದಂತೆ ಹಲವು ರಾಜಕೀಯ ನಾಯಕರಿಗೆ ನೋಟಿಸ್ ನೀಡಿದ್ದರು. ಚುನಾಯಿತ ಪ್ರತಿನಿಧಿಯಾಗಿ ಅಪಕೀರ್ತಿಕರ ನಡತೆ ಹೊಂದಿದ್ದೀರಿ, ಹುದ್ದೆಗೆ ತರವಲ್ಲದ ರೀತಿ ನಡೆದುಕೊಂಡಿದ್ದೀರೆಂದು ಚಾಟಿ ಬೀಸಿದ್ದರು.

ಕೇವಲ ಇದು ಅಷ್ಟೇ ಅಲ್ಲದೇ ಹಾಸನದಲ್ಲಿ ಇನ್ನಿತರ ಅಕ್ರಮ ಚುಟುವಟಿಕೆಗಳಿಗೆ ರೋಹಿಣಿ ಸಿಂಧೂರಿ ಬ್ರೇಕ್ ಹಾಕಿದ್ದರು. ಇದರಿಂದ ಸಚಿವ ರೇವಣ್ಣ ಅವರೇ ತಮ್ಮ ಸೋದರರಾದ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿ ರೋಹಿಣಿ ಸಿಂಧೂರಿ ಅವರನ್ನ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಈಗಾಗಲೇ ರಾಜಕೀಯ ವಲಯದಿಂದ ಕೇಳಿ ಬಂದಿದೆ.

ಜನ ಮೆಚ್ಚಿದ ದಕ್ಷ ಡಿಸಿ ರೋಹಿಣಿಯ ಖಡಕ್ ಅಧಿಕಾರಕ್ಕೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಬೆದರಿ ವರ್ಗಾವಣೆ ಮಾಡಿಸಿದ್ರಾ? ಒಂದು ವೇಳೆ ಇಲ್ಲದಿದ್ದರೆ ಮತ್ಯಾಕೆ ಅವರನ್ನು ವರ್ಗಾವಣೆ ಮಾಡಿದ್ದು? ಎನ್ನುವ ಹಲವು ಪ್ರಶ್ನೆಗಳು ಸಾರ್ವಜನಕರಲ್ಲಿ ಕೇಳಿಬಂದಿವೆ. ಈ ಬಗ್ಗೆ ರೇವಣ್ಣ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Comments are closed.