ಕರ್ನಾಟಕ

ಯುವತಿಯರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ: ಯುವಕನ ಬಂಧನ

Pinterest LinkedIn Tumblr


ಬೆಂಗಳೂರು: ಯುವತಿಯರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಹೊಂದಿದ್ದ ಹಾಗೂ ಯುವತಿಯರಂತೆ ಧ್ವನಿ ಬದಲಿಸಿ ವಂಚಿಸುತ್ತಿದ್ದ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ವಿನಯ್ (32) ಬಂಧಿತ. ಖಚಿತ ಮಾಹಿತಿ ಮೇರೆಗೆ ಆರೋಪಿ ತಂಗಿದ್ದ ತುಮಕೂರು ಟೌನ್ ಶಿರಾ ಗೇಟ್ ಬಳಿಯ ಕೆಎಚ್‌ಬಿ ಕಾಲೋನಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ ನಾಲ್ಕು ಮೊಬೈಲ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಯುವತಿಯರ ಹೆಸರಿನ ನಕಲಿ ಖಾತೆ ತೆರೆದ ಆರೋಪಿ ವಿನಯ್ ಪ್ರೋಫೈಲ್‌ಗೆ ಯುವತಿಯ ಪೋಟೊ ಅಪ್ಲೋಡ್ ಮಾಡುತ್ತಿದ್ದ. ಬಳಿಕ ಪುರುಷರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸಲುಗೆ ಬೆಳೆಸುತ್ತಿದ್ದ. ಬಳಿಕ ಅವರ ಮೊಬೈಲ್ ನಂಬರ್ ಪಡೆಯುವ ಜತೆಗೆ ಭಾವಚಿತ್ರ ಪಡೆಯುತ್ತಿದ್ದ. ವೈಯಕ್ತಿಕ ಮತ್ತು ಖಾಸಗಿ ಮಾಹಿತಿ ಸಂಗ್ರಹಿಸಿದ ನಂತರ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡುವಂತೆ ಬೆದರಿಸಿ ಮಾಡಿ ವಂಚಿಸುತ್ತಿದ್ದ ಎನ್ನಲಾಗಿದೆ.

ನಿರುದ್ಯೋಗಿಯಾಗಿದ್ದ ಆರೋಪಿ ಹಣಕ್ಕಾಗಿ ಮತ್ತು ಐಷಾರಾಮಿ ಜೀವನ ನಡೆಸಲು ಈ ರೀತಿ ಹಲವರನ್ನು ವಂಚಿಸಿದ್ದ. ವಿನಯ್ ಇದಕ್ಕೂ ಮುನ್ನ ಕೋಳಿ ವ್ಯಾಪಾರದ ಅಂಗಡಿ ಮಾಡುತ್ತಿದ್ದ. ಜೂಜಾಡಿ ಹಣ ಕಳೆದುಕೊಂಡಿದ್ದರಿಂದ ಈ ಕೃತ್ಯಕ್ಕೆ ಇಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.