ಕರ್ನಾಟಕ

ದಬ್ಬಾಳಿಕೆ ರಾಜಕಾರಣ ನಮ್ಮ ಕುಟುಂಬದಲ್ಲಿ ಬಂದಿಲ್ಲ: ಕುಮಾರಸ್ವಾಮಿ

Pinterest LinkedIn Tumblr


ಹಾಸನ: ದಬ್ಬಾಳಿಕೆ ರಾಜಕಾರಣ ನಮ್ಮ ಕುಟುಂಬದಲ್ಲಿ ಬಂದಿಲ್ಲಾ. ನಮ್ಮ ಕುಟುಂಬ ಜನರ ಪ್ರೀತಿಯಿಂದ ರಾಜಕಾರಣ ಮಾಡುತ್ತಾ ಬಂದಿದೆ ಎಂದು ಮುಖ್ಯಮಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರ ವಿಕೇಟ್ ಉರುಳುತ್ತೆ ಅಂತಾ ಕೆಲವರು ಹೇಳಿದರು. ಆದರೆ, ನಾವು ಯಾವತ್ತೂ ದಬ್ಬಾಳಿಕೆಯನ್ನು ಮಾಡಿ ರಾಜಕಾರಣ ಮಾಡಿಲ್ಲ, ಈಗಿನ ಕಾಲದಲ್ಲಿ ದಬ್ಬಾಳಿಕೆ ರಾಜಕಾರಣ ಮಾಡಿದರೆ ನಡೆಯುವುದಿಲ್ಲ ಎಂದು ಶಾಸಕ ಪ್ರೀತಮ್ ಗೌಡ ಅವರಿಗೆ ಸಿಎಂ ಪರೋಕ್ಷವಾಗಿ ಟಾಂಗ್ ನೀಡಿದರು.

ಮಣ್ಣಿನ ಮಗ ಎಂದು ಹೇಳಿ ಮಣ್ಣಿನ ಮಕ್ಕಳ ಸಾಲಮನ್ನಾದಲ್ಲಿ ಉಲ್ಟಾ ಹೊಡೆದ ಸಿಎಂ ಎಂದು ಹೇಳುತ್ತಿದ್ದರು.ಕೆಲವರು ಬಜೆಟ್ ಮಂಡನೆ ಮಾಡುತ್ತಾರಾ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡುತ್ತಿದ್ದರು. ಆದರೆ ಈಗ ಬಜೆಟ್ ಮಂಡನೆ ಮಾಡಿದ್ದೇನೆ ಎಂದು ಎದೆತಟ್ಟಿ ಹೇಳುತ್ತೇನೆ. ಹಾಸನ ಜಿಲ್ಲೆಯ ಋಣವನ್ನಷ್ಟೇ ಅಲ್ಲಾ ರಾಜ್ಯದ ಜನರ ಋಣ ತೀರಿಸುತ್ತೇನೆ ಎಂದು ಹೇಳಿದರು.

ಹಾಸನ ಜಿಲ್ಲೆಯಲ್ಲಿ ಸಹಕಾರಿ ಸಂಘದ 1ಲಕ್ಷದ 29 ಸಾವಿರ ಕುಟುಂಬಗಳಿಗೆ 502 ಕೋಟಿ ಸಾಲಮನ್ನಾ ಆಗಿದೆ, ಒಟ್ಟು ಜಿಲ್ಲೆಯಲ್ಲಿ ಸಹಕಾರಿ ಸಂಘದ ರೈತರ ಸಾಲ 546 ಕೋಟಿ ಇತ್ತು. ಹಾಸನ ಜಿಲ್ಲೆ ಸಹಕಾರಿ ಸಂಘದಲ್ಲಿ ರೈತರ ಸಾಲ 44 ಕೋಟಿ ಬಾಕಿ ಇದೆ ಎಂದು ಸಿಎಂ ತಿಳಿಸಿದರು.

ರೈತರ ಸಾಲಮನ್ನಾ ವಿಚಾರದಲ್ಲಿ ಉಲ್ಟಾ ಹೊಡೆದ ಸಿಎಂ ಹೆಚ್ಡಿಕೆ

ಹಾಸನ ಅಭಿವೃದ್ಧಿಗಷ್ಟೇ ಸೀಮಿತ ಈ ಸರ್ಕಾರ ಎಂದು ಕೆಲವರು ಹೇಳುತ್ತಾರೆ. ನಾನು ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದೇನೆ. ರಾಜ್ಯದ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ಡಿಸೆಂಬರ್ ಗೆ ಎಲ್ಲಾ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಉಲ್ಟಾ ಹೊಡೆದ ಸಿಎಂ, ಕಳೆದವಾರ ಹಾಸನಕ್ಕೆ ಬಂದಾಗ ಜೂನ್ ನಲ್ಲಿ ಸಾಲಮನ್ನಾ ಮಾಡುತ್ತೇವೆ ಎಂದಿದ್ದರು ಆದರೆ, ಮತ್ತೆ ಈಗ ಡಿಸೆಂಬರ್ ನಲ್ಲಿ ಸಾಲಮನ್ನಾ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನ ಮುಂದುವರೆಸಿದ್ದೇವೆ – ದೇವೇಗೌಡ

ಮೈತ್ರಿ ಸರ್ಕಾರದಲ್ಲಿ ಹಿಂದಿನ ಸಿದ್ದರಾಮಯ್ಯರ ಕಾರ್ಯಕ್ರಮಗಳನ್ನ ಮುಂದುವರೆಸಿದ್ದೇವೆ. ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನ ಮುಂದುವರೆಸಿಕೊಂಡು ಸಾಲಮನ್ನಾ ಮಾಡಿದ್ದಾರೆ, ಹಿಂದೂಸ್ತಾನದಲ್ಲಿ ಎಲ್ಲೂ ಮಾಡದ ಕಾರ್ಯಕ್ರಮವಾದ ಸಾಲಮನ್ನಾವನ್ನ ಸಿಎಂ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ತಿಳಿಸಿದರು.

Comments are closed.