ಕರ್ನಾಟಕ

ಬೆಂಗಳೂರು: ಉಗ್ರ ದಾಳಿ ಸಂಭ್ರಮಿಸಿದ್ದ ಕಾಶ್ಮೀರಿ ಯುವಕ ತಾಹೀರ್ ಲತೀಫ್ ಬಂಧನ

Pinterest LinkedIn Tumblr


ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ವಿಚಾರವಾಗಿ ಉಗ್ರನ ಪರ ಹೇಳಿಕೆ ನೀಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ತಾಹೀರ್ ಲತೀಫ್ ಎಂಬಾತನನ್ನು ಬಾಗಲೂರು ಪೊಲೀರು ಬಂಧಿಸಿದ್ದಾರೆ.

ಕಾಶ್ಮೀರ ಮೂಲದ ಬಂಧಿತ ತಾಹೀರ್ ಲತೀಫ್. ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಎನ್ನಲಾಗಿದೆ. ಬಂಧಿತ ಆರೋಪಿ. ದಾಳಿ ನಡೆಸಿದ ಉಗ್ರನ ಪರವಾಗಿ ಫೇಸ್ ಬುಕ್ ನಲ್ಲಿ ಬಿಗ್ ಸೆಲ್ಯೂಟ್ , ನಿನಗೆ ಸ್ವರ್ಗ ಪ್ರಾಪ್ತಿಯಾಗುತ್ತೆ ಎಂದು ಉಗ್ರನ ಪರವಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಎನ್ನಲಾಗಿದೆ.

ಇತ ಜಮ್ಮುವಿನ ಬಾರಮಲ್ಲಾ ಜಿಲ್ಲೆಯ ನಿವಾಸಿಯಾಗಿದ್ದು, ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್​​ ಕಾಲೇಜಿನಲ್ಲಿ ಮೂರನೇ ವರ್ಷದ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ, ಇತನ ವಿರುದ್ದ ಪೊಲೀಸರು ಅಪರಾಧಿಕ ಒಳಸಂಚಿನಿಂದ ಕೃತ್ಯಕ್ಕೆ ಬೆಂಬಲಿಸಿರುವುದು ಭಾರತದ ವಿರುದ್ದ ಭಯೋತ್ಪಾದಕರ ಪರವಾಗಿ ಹೇಳಿಕೆ ನೀಡಿದ್ದಾರೆ ಎಂದು ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮತ್ತೊಬ್ಬ ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ ಪೊಲೀಸರು

ಇನ್ನೊಬ್ಬ ಆರೋಪಿ ಅಬಿದ್​​ ಮಲ್ಲಿಕ್​​ ಭಾರತ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ ನಂತರದಲ್ಲಿ ಈತ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ್ದಾರೆ. ಫೇಸ್ಬುಕ್ಕಿನಲ್ಲಿ ಆತ್ಮಾಹುತಿ ಮಾಡಿಕೊಂಡ ಉಗ್ರನಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಲ್ಲದೇ; ಇದು ನಿಜವಾದ ಸರ್ಜಿಕಲ್ ಸ್ಟ್ರೈಕ್ ಎಂದು ಬರೆದುಕೊಂಡಿದ್ದಾರೆ. ಇದೀಗ ಅಬಿದ್ ಮಲ್ಲಿಕ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇತನ ವಿರುದ್ದ ಹೆಚ್​ಎಎಲ್ ಪೋಲಿಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಇತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿ ಅಬಿದ್​​ ಮಲ್ಲಿಕ್ ಇಂಜಿನಿಯರಿಂಗ್ ಮುಗಿಸಿ ಹುಳಿಮಾವಿನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸವನ್ನು ಮಾಡುತ್ತಿದ್ದ ಎಂದು ತನಿಖೆಯ ವೇಳೆ ಗೊತ್ತಾಗಿದೆ.

Comments are closed.