ಕರ್ನಾಟಕ

ಬಿಜೆಪಿಯಿಂದ 25 ಕೋಟಿ ಆಫರ್​ ಬಂದಿತ್ತು; ಜೆಡಿಎಸ್​ ಶಾಸಕ

Pinterest LinkedIn Tumblr


ಕೋಲಾರ: ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂದು ಮೈತ್ರಿ ನಾಯಕರು ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಆದರೆ ಕಮಲ ಪಾಳಯದ ನಾಯಕರು ನಾವು ಯಾವ ಆಪರೇಷನ್​ ಕಮಲವನ್ನೂ ಮಾಡುತ್ತಿಲ್ಲ, ನಮಗೆ ಅದರ ಅವಶ್ಯಕತೆ ಇಲ್ಲ ಎಂದು ಹೇಳುತ್ತಲೇ ಇದ್ದಾರೆ. ಇದರ ಬೆನ್ನಲ್ಲೇ ಕೋಲಾರ ಜೆಡಿಎಸ್​ ಶಾಸಕ ಹೊಸ ಬಾಂಬ್​ ಸಿಡಿಸಿದ್ದಾರೆ. ಬಿಜೆಪಿಯಿಂದ ನನಗೆ 25 ಕೋಟಿ ಆಫರ್​ ಬಂದಿತ್ತು. 5 ಕೋಟಿ ಅಡ್ವಾನ್ಸ್​ ಕೂಡ ಕೊಟ್ಟಿದ್ದರು ಎಂದು ಹೇಳಿದ್ದಾರೆ

ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ್​, ಸಿ.ಪಿ.ಯೋಗಿಶ್ವರ್ ಅವರು ಕೋಲಾರ ಜೆಡಿಎಸ್​ ಶಾಸಕ ಶ್ರೀನಿವಾಸ್​ಗೌಡ ಅವರ ಮನೆಗೆ ಬಂದು ಹಣದ ಆಮಿಷ ಒಡ್ಡಿದ್ದರಂತೆ. ಇವರ ಜೊತೆಗೆ ಬಿಜೆಪಿ ಮುಖಂಡ ವಿಶ್ವನಾಥ್​ ಸಹ ಬಂದಿದ್ದರಂತೆ. ಹೀಗಂತ ಸ್ವತಃ ಜೆಡಿಎಸ್​ ಶಾಸಕರೇ ಹೇಳಿದ್ದಾರೆ.

“ನನಗೆ ಬಿಜೆಪಿಯಿಂದ 25 ಕೋಟಿ ರೂ. ಆಫರ್​ ಬಂದಿದ್ದು ನಿಜ. 5 ಕೋಟಿ ಅಡ್ವಾನ್ಸ್​​ ದುಡ್ಡನ್ನು ನನ್ನ ಮನೆಗೆ ತಂದು ಕೊಟ್ಟಿದ್ದರು. ಜೆಡಿಎಸ್​ಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ಆದರೆ 2 ತಿಂಗಳ ಬಳಿಕ ನಾನು ಆ ಹಣವನ್ನು ವಾಪಸ್​ ಮಾಡಿದೆ” ಎಂದು ಹೊಸ ಬಾಂಬ್​ ಸಿಡಿಸಿದ್ದಾರೆ.

ಬಿಜೆಪಿ ಮುಖಂಡರು ನನಗೆ ನೇರ ಆಮಿಷ ಒಡ್ಡಿದ್ದರು. ಉಳಿಕೆ ದುಡ್ಡನ್ನು ನಂತರ ಕೊಡುವುದಾಗಿಯೂ ಭರವಸೆ ನೀಡಿದ್ದರು. ಅಷ್ಟೇ ಅಲ್ಲದೇ ಉಸ್ತುವಾರಿ ಸಚಿವ ಪದವಿಯ ಆಮಿಷವೂ ಇತ್ತು. ಆದರೆ ಸಿಎಂ ಕುಮಾರಸ್ವಾಮಿ ಸೂಚನೆ ಮೇರೆಗೆ ಅವರು ಕೊಟ್ಟಿದ್ದ ಹಣವನ್ನು ಹಿಂದಿರುಗಿಸಿಬಿಟ್ಟೆ. ಬಿಜೆಪಿ ನಾಯಕ ಆರ್​.ಅಶೋಕ್​ ಅವರ ಕೈಗೆ ವಾಪಸ್​ ಕೊಟ್ಟು ಕಳಿಸಿದೆ ಎಂದು ಹೇಳಿದ್ದಾರೆ.

Comments are closed.