ಕರ್ನಾಟಕ

ಕೇಂದ್ರ ಬಜೆಟ್​ಗೆ ರಾಜ್ಯ ಬಿಜೆಪಿ ನಾಯಕರಿಂದ ಭರ್ಜರಿ ಸ್ವಾಗತ

Pinterest LinkedIn Tumblr


ಬೆಂಗಳೂರು: ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಂಡಿಸಿರುವ ಬಜೆಟ್ ಬಗ್ಗೆ ವಿರೋಧ ಪಕ್ಷಗಳು ಟೀಕಾಪ್ರಹಾರ ನಡೆಸುತ್ತಿದ್ದರೆ ಇತ್ತ ಬಿಜೆಪಿ ನಾಯಕರು ಶಹಬ್ಬಾಸ್​ ಎಂದು ಬೆನ್ನು ತಟ್ಟುತ್ತಿದ್ದಾರೆ.

ರಾಜ್ಯದ ಬಿಜೆಪಿ ಶಾಸಕರು, ಸಂಸದರು ಕೇಂದ್ರ ಸರ್ಕಾರದ ಬಜೆಟ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಧ್ಯಮ ವರ್ಗದವರನ್ನು ಗುರಿಯಾಗಿಟ್ಟುಕೊಂಡು ಅವರಿಗೆ ಅನುಕೂಲವಾಗುವಂತೆ ಬಜೆಟ್​ ಮಂಡಿಸಲಾಗಿದೆ ಎಂದಿದ್ದಾರೆ.

ಆರ್ಥಿಕ ತಜ್ಞರು ಹಾಡಿ ಹೊಗಳಿದ್ದಾರೆ- ಯಡಿಯೂರಪ್ಪ:

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಕೇಂದ್ರದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಮಂಡನೆಯಾದ ಬಜೆಟ್​ ಅನ್ನು ಕೇಂದ್ರದ ಆರ್ಥಿಕ ತಜ್ಞರು ಸ್ವಾಗತ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಜೆಟ್​ಗೆ ರಾಜ್ಯದಲ್ಲಿ ವಿಜಯೋತ್ಸವ ಆಚರಿಸಬೇಕು. ಬಜೆಟ್​ನಲ್ಲಿ ರೈತರಿಗೆ ಒಳ್ಳೆಯ ಕೊಡುಗೆಗಳು ಸಿಕ್ಕಿವೆ. ಆದಾಯ ತೆರಿಗೆ ಮಿತಿ ಏರಿಕೆಯಿಂದ ಮಧ್ಯಮ ವರ್ಗದವರಿಗೆ ಸಹಾಯ ಆಗಲಿದೆ. ಆದಾಯ ತೆರಿಗೆ ಅನ್ ಲೈನ್ ವ್ಯವಸ್ಥೆ ಸ್ವಾಗತಾರ್ಹ. ದಿಟ್ಟ ಆರ್ಥಿಕ ನೀತಿಯಿಂದ ತೆರಿಗೆ ಸಂಗ್ರಹ ದ್ವಿಗುಣಗೊಂಡಿದೆ. ಕಾರ್ಮಿಕ ವೇತನ ಹೆಚ್ಚಳ, ಗ್ರಾಚುಯಿಟಿ ಹೆಚ್ಚಳ ಉತ್ತಮವಾಗಿದೆ. ಸಿದ್ದರಾಮಯ್ಯನವರಾಗಲಿ, ರಾಹುಲ್ ಗಾಂಧಿಯಾಗಲಿ ಇನ್ಯಾರೋ ಕಾಂಗ್ರೆಸ್ ಮುಖಂಡರಿರಲಿ ಅವರು ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಈ ಬಜೆಟ್ ಅನ್ನು ಸಿದ್ದರಾಮಯ್ಯ ವಿರೋಧಿಸಬಹುದು. ಆದರೆ, ಆರ್ಥಿಕ ತಜ್ಞರು ಬಜೆಟ್ ಅನ್ನು ಹಾಡಿ ಹೊಗಳುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಜನಪರ, ಬಡವರ ಪರ ಬಜೆಟ್- ಜಗದೀಶ್​ ಶೆಟ್ಟರ್:

ಕೇಂದ್ರ ಬಜೆಟ್​ ಬಗ್ಗೆ ಜಗದೀಶ್​ ಶೆಟ್ಟರ್​ ಪ್ರತಿಕ್ರಿಯೆ ನೀಡಿದ್ದು, ಜನಪರ, ಬಡವರ ಪರವಾದ ಮಾದರಿ ಬಜೆಟ್ ಇದಾಗಿದ್ದು, ಗೋಯಲ್ ಅತ್ಯಂತ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಮೋದಿಗೆ ದೇಶದ ಜನರ ಪರವಾಗಿ ಅಭಿನಂದಿಸುವೆ. ದೇಶದ ಜನರ ನಿರೀಕ್ಷೆಗಳು ನಿಜವಾಗಿದೆ. ಸಣ್ಣ ಹಿಡುವಳಿದಾರರಿಗೆ 6,000 ಪ್ರೋತ್ಸಾಹಧನ ನೀಡಲಾಗುವುದು. 12 ಕೋಟಿ ರೈತರಿಗೆ ಇದರ ಲಾಭ ಸಿಗಲಿದೆ. ಸಣ್ಣ ಕೈಗಾರಿಕೆಗೆ ಸಾಲದ ಬಡ್ಡಿದರ ಕಡಿಮೆಯಾಗಿದೆ. ದೂರದೃಷ್ಟಿ ಇರುವ ಬಜೆಟ್ ಇದಾಗಿದೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

ಮಧ್ಯಮವರ್ಗದವರಿಗೆ ಲಾಭವಾಗಲಿದೆ- ಸುರೇಶ್​ ಅಂಗಡಿ:

ಬಜೆಟ್ ಬಗ್ಗೆ ಸಂಸದ ಸುರೇಶ್ ಅಂಗಡಿ ಪ್ರತಿಕ್ರಿಯೆ ನೀಡಿದ್ದು, ಇದು ಐತಿಹಾಸಿಕ ಬಜೆಟ್ ಆಗಿದೆ. ಇದರಿಂದ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ತೆರಿಗೆ ಮಿತಿ ಹೆಚ್ಚಳದಿಂದ ಮಧ್ಯಮವರ್ಗದವರಿಗೆ ಲಾಭವಾಗಲಿದೆ ಎಂದು ಸಚಿವ ಪಿಯೂಷ್ ಗೋಯಲ್​ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ರೈತರಿಗೆ ವರ್ಷಕ್ಕೆ 6,000 ರೂಪಾಯಿ!
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ ಅಡಿಯಲ್ಲಿ , 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಅಕೌಂಟ್ ಗೆ ವರ್ಷಕ್ಕೆ 6,000 ರೂಪಾಯಿ ಜಮಾ ಮಾಡಲಾಗುವುದು.#ಮೋದಿ_ಮತ್ತೊಮ್ಮೆ pic.twitter.com/mbdUtFCoco

— Suresh Angadi MP (@AngadiMp) February 1, 2019

ಕರ್ನಾಟಕಕ್ಕೆ ಮಹತ್ವದ ಕೊಡುಗೆ- ಶೋಭಾ ಕರಂದ್ಲಾಜೆ:

ಸಣ್ಣ, ಅತಿ ಸಣ್ಣ ರೈತರಿಗೆ ದೊಡ್ಡ ಕೊಡುಗೆ ಸಿಕ್ಕಿದೆ. ನೇರವಾಗಿ ರೈತರ ಖಾತೆಗೆ ಹಣ ಹಾಕುವುದು ಒಳ್ಳೆಯ ಕ್ರಮ. ತೆರಿಗೆ ಮಿತಿ ಹೆಚ್ಚಳದಿಂದ ಮಧ್ಯಮವರ್ಗಕ್ಕೆ ಅನುಕೂಲವಾಗಲಿದೆ. ಪಶುಪಾಲನೆ, ಗೋವುಗಳ ಸಂರಕ್ಷಣೆಗಾಗಿ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಕರಾವಳಿಯ ಮೀನುಗಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹೆಚ್ಚಿನ ಯೋಜನೆಗಳಿಗಾಗಿ 750 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕರುನಾಡಿಗೆ ಮಹತ್ವದ ಕೊಡುಗೆ!

– ಪಶುಪಾಲನೆ, ಗೋವುಗಳ ಸಂರಕ್ಷಣೆಗಾಗಿ ಹೆಚ್ಚಿನ ಅನುದಾನ ಮೀಸಲಿಟ್ಟ ಕೇಂದ್ರ ಸರಕಾರ.

– ಕರಾವಳಿಯ ಮೀನುಗಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹೆಚ್ಚಿನ ಯೋಜನೆಗಳಿಗಾಗಿ 750 ಕೋಟಿ ಬಿಡುಗಡೆ.

ಭಾರತ ವೇಗವಾಗಿ ಬೆಳೆಯುತ್ತಿರುವ ದೇಶ. 2.5 ಲಕ್ಷದಿಂದ 5 ಲಕ್ಷದವರೆಗೆ ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡಲಾಗಿದೆ. ಇದರಿಂದ 3 ಕೋಟಿ ಜನರಿಗೆ ಲಾಭವಾಗಲಿದೆ. ಬಜೆಟ್​ನಲ್ಲಿ 12 ಕೋಟಿ ರೈತರಿಗೆ ನೆರವು ಘೋಷಿಸಲಾಗಿದೆ. ಬಡವರ ಭಾಗ್ಯದ ಬಾಗಿಲು ತೆಗೆದಂತಾಗಿದೆ. ಉಜ್ವಲ ಯೋಜನೆ ಹೆಚ್ಚಿಸಿರುವುದು ದೊಡ್ಡ ಕೊಡುಗೆಯಾಗಿದೆ ಎಂದು ಬಜೆಟ್ ಬಗ್ಗೆ ಸಂಸದ ಪ್ರಹ್ಲಾದ್ ಜೋಷಿ‌ ಪ್ರತಿಕ್ರಿಯೆ ನೀಡಿದ್ದಾರೆ.

ಅಟಲ್‌ ಪಿಂಚಣಿ ಯೋಜನೆಯಡಿ ಅಸಂಘಟಿತ ಕಾರ್ಮಿಕರ ಕಲ್ಯಾಣವಾಗುತ್ತಿದೆ. ಕರ್ನಾಟಕದಲ್ಲಿ 9,15,260 ಜನರು ಫಲಾನುಭವಿಗಳಿದ್ದಾರೆ!
ಮೋದಿ ಮತ್ತೊಮ್ಮೆ. pic.twitter.com/Sw5pi5wx9l

— Pralhad Joshi (@JoshiPralhad) February 1, 2019

Comments are closed.