ಕರ್ನಾಟಕ

ಐಪಿಎಸ್ ಅಧಿಕಾರಿ ಡಿ.ರೂಪಾ ಮೊಬೈಲ್ ಕಳವು‌ ಪ್ರಕರಣ ಸಂಬಂಧ ಬಂಧಿಸಿದ್ದ ವ್ಯಕ್ತಿಯ ಎಫ್‌ಐಆರ್ ರದ್ದು!

Pinterest LinkedIn Tumblr


ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಮೊಬೈಲ್ ಕಳವು ಮಾಡಿದ್ದ ಆರೋಪ ಸಂಬಂಧ ವ್ಯಕ್ತಿವೋರ್ವನ ವಿರುದ್ಧ ಬಿಡದಿ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಿ ಹೈಕೋರ್ಟ್ ಆದೇಶ ನೀಡಿದೆ.

ಮೊಬೈಲ್ ಕಳ್ಳತನವಾಗಿಲ್ಲ. ರೂಪಾ ಅವರೇ ಮೊಬೈಲ್ ಬಿಟ್ಟು ಹೋಗಿದ್ದರು. ಒಂದು ದಿನ ವಿಳಂಬವಾಗಿ ರೂಪಾ ದೂರು ದಾಖಲಿಸಿದ್ದರು. ಅವರು ಐಪಿಎಸ್ ಅಧಿಕಾರಿಯಾಗಿದ್ದು , ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಹೀಗೆ ನಡೆದುಕೊಂಡರೆ ಹೇಗೆ ಎಂದು ನ್ಯಾಯಾಲಯ ಪ್ರಶ್ನೆ ಮಾಡಿದೆ. ಒಂದು ದಿನ ವಿಳಂಬವಾಗಿ ಪ್ರಕರಣ ದಾಖಲಿಸಿದರೆ ಹೇಗೆ? ಎಂದಿರುವ ಹೈಕೋರ್ಟ್ ನ್ಯಾಯಮೂರ್ತಿ ರೂಪಾ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅ.21, 2018 ರಂದು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಡಿ. ರೂಪಾ ಮೊಬೈಲ್ ಕಳೆದುಕೊಂಡಿದ್ದರು. ನಂತರ ಅ.22 ರಂದು ಇಮೇಲ್ ಮೂಲಕ ಬಿಡದಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾದ ಮೇಲೆ ಪೊಲೀಸರು ಮೊಬೈಲ್ ಪತ್ತೆ ಮಾಡಿದ್ದರು. ಆದರೆ ಆರೋಪಿಯಾಗಿದ್ದ ರಾಮಪ್ಪ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Comments are closed.