ಕರ್ನಾಟಕ

ಜ.28ರಿಂದ ಮೊದಲ ಬಾರಿಗೆ ಹಸಿರು ಮಾರ್ಗಕ್ಕೆ ಆರು ಬೋಗಿಯ ಮೆಟ್ರೋ ರೈಲು ಲಭ್ಯ

Pinterest LinkedIn Tumblr

ಬೆಂಗಳೂರು, ಜನವರಿ 26: ಯಲಚೇನಹಳ್ಳಿ-ನಾಗಸಂದ್ರ ಹಸಿರು ಮಾರ್ಗದಲ್ಲಿ ಜನವರಿ 26ರಿಂದ ಆರು ಬೋಗಿಗಳ ಮೆಟ್ರೋ ರೈಲು ಸಂಚರಿಸಲಿದೆ.

ಮೈಸೂರು ರಸ್ತೆ -ಬೈಯಪ್ಪನಹಳ್ಳಿ ನೇರಳೆ ಮಾರ್ಗಕ್ಕೆ ಈಗಾಗಲೇ 6 ಬೋಗಿಯ ಮೂರು ರೈಲುಗಳು ಸಂಚರಿಸುತ್ತಿದೆ. ಇದೇ ಮೊದಲ ಬಾರಿಗೆ ಹಸಿರು ಮಾರ್ಗಕ್ಕೆ ಆರು ಬೋಗಿಯ ಮೆಟ್ರೋ ರೈಲು ಲಭ್ಯವಾಗಲಿದೆ.

ಹಸಿರು ಮಾರ್ಗದಲ್ಲಿ ಈಗಾಗಲೇ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಮೊದಲ ಆರು ಬೋಗಿ ರೈಲಿಗೆ ಸೋಮವಾರ ಚಾಲನೆ ನೀಡಲಾಗುತ್ತಿದೆ. ಸಂಪಿಗೆ ರಸ್ತೆಯಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

ನೇರಳೆ ಮಾರ್ಗದಲ್ಲಿ ದಟ್ಟಣೆ ಹೆಚ್ಚಿರುವುದರಿಂದ ಮೊದಲ ಮೂರು ರೈಲುಗಳನ್ನು ಅಲ್ಲಿಗೆ ನೀಡಲಾಗಿದೆ. ಈಗ ನೇರಳೆ ಮಾರ್ಗದಲ್ಲಿ ಸ್ವಲ್ಪ ಮಟ್ಟಿಗೆ ದಟ್ಟಣೆ ಕಡಿಮೆಯಾಗಿದೆ. ಆದ್ದರಿಂದ ನಾಲ್ಕನೇ ಆರು ಬೋಗಿ ರೈಲನ್ನು ಹಸಿರು ಮಾರ್ಗಕ್ಕೆ ನೀಡಲಾಗುತ್ತದೆ. ಆರು ಬೋಗಿಯ ರೈಲಿನಲ್ಲಿ ಒಮ್ಮೆ 2,004 ಮಂದಿ ಪ್ರಯಾಣಿಸಬಹುದಾಗಿದೆ.

Comments are closed.