ಕರ್ನಾಟಕ

ಉಡಾನ್ ಯೋಜನೆಯ ಅಡಿಯಲ್ಲಿ ಕಲಬುರಗಿ ಏರ್ ಪೋರ್ಟ್ ನಿಂದ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್

Pinterest LinkedIn Tumblr

ಕಲಬುರಗಿ : ಕಲಬುರಗಿ ಜನರಿಗೆ ಭರ್ಜರಿ ಗುಡ್ ನ್ಯೂಸ್, ಉಡಾನ್ ಯೋಜನೆಯ ಅಡಿಯಲ್ಲಿ ಕಲಬುರಗಿ ಏರ್ ಪೋರ್ಟ್ ನಿಂದ ವಿಮಾನ ಹಾರಾಟ ಕಲ್ಪಿಸಲು 2 ಕಂಪನಿಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಉಡಾನ್ ಯೋಜನೆ ಅಡಿ ಕಲಬುರಗಿಯಿಂದ ಒಟ್ಟು ಮೂರು ರೂಟ್ ಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸ್ಟಾರ್ ಏರ್ ಮತ್ತು ಆಲಯನ್ಸ್ ಏರ್ ಕಂಪನಿಗಳು ಈ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲಿವೆ. ಕಲಬುರಗಿ-ಬೆಂಗಳೂರು, ಕಲಬುರಗಿ -ದೆಹಲಿ ಮತ್ತು ಕಲಬುರಗಿ -ತಿರುಪತಿ ನಡುವೆ ವಿಮಾನ ಸಂಚಾರಕ್ಕೆ ಈ ಕಂಪನಿಗಳಿಗೆ ಪರವಾನಗಿ ನೀಡಲಾಗಿದ್ದು, ಸ್ಟಾರ್ ಏರ್ ಕಾರ್ಯಾಚರಣೆ ನಡೆಯಲಿದೆ.

ಕಲಬುರಗಿ-ಮುಂಬೈ ನಡುವೆ ವಿಮಾನ ಸಂಪರ್ಕ ಬೇಕೆಂದು ಹಲವು ದಿನಗಳ ಬೇಡಿಕೆ ಇತ್ತು, ಆದರೆ ಯಾವ ಕಂಪನಿಯೂ ಇದನ್ನು ನಮೂದಿಸಿಲ್ಲ. ಹೀಗಾಗಿ ಕಲಬುರಗಿಯಿಂದ ಮುಂಬೈಗೆ ವಿಮಾನ ಸಂಪರ್ಕಕ್ಕಾಗಿ ಕಾಯಬೇಕಿದೆ.

Comments are closed.