ಕರ್ನಾಟಕ

ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿರುವ ಶಾಸಕ ಗಣೇಶ್​ನನ್ನು ಶೀಘ್ರದಲ್ಲೇ ಬಂಧಿಸುತ್ತೇವೆ; ಗೃಹ ಸಚಿವ ಎಂ.ಬಿ.ಪಾಟೀಲ್

Pinterest LinkedIn Tumblr

ಬೆಂಗಳೂರು: ಬಿಡದಿಯ ಈಗಲ್​ಟನ್ ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕರ ಮಾರಾಮಾರಿ ಪ್ರಕರಣ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಆನಂದ್​ ಸಿಂಗ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕಣ್ಮರೆಯಾಗಿರುವ ಕಂಪ್ಲಿ ಶಾಸಕ ಗಣೇಶ್​ ಬಂಧನಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಇದೇ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಎಂ.ಬಿ.ಪಾಟೀಲ್​ ಅವರು ಶೀಘ್ರದಲ್ಲಿಯೇ ಗಣೇಶ್​ನನ್ನು ಬಂಧಿಸುವುದಾಗಿ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಂಪ್ಲಿ ಗಣೇಶ್ ಮೇಲೆ ಎಫ್ ಐಆರ್ ದಾಖಲಾಗಿದೆ. ಪೊಲೀಸರು ಅವರ ಕೆಲಸ ಮಾಡ್ತಿದ್ದಾರೆ. ಅವರನ್ನು ರೆಸಾರ್ಟ್​ನಿಂದ ಹೊರಕಳಿಸಿ ಎಫ್​ಐಆರ್ ಮಾಡಿಲ್ಲ. ಅವರನ್ನು ರೆಸಾರ್ಟ್​ನಿಂದ ಹೊರಕಳಿಸಿ ಎಫ್​ಐಆರ್ ಮಾಡಿಲ್ಲ. ಅರೆಸ್ಟ್ ಆಗಿಲ್ಲ ಅಂದ್ರೆ ಸುಮ್ನೆ ಕೂತಿದ್ದಾರೆ ಅಂತಲ್ಲ. ಇದರಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ಸರ್ಕಾರ, ಇಲಾಖೆ ಸುಮ್ಮನೆ ಕೂತಿಲ್ಲ. ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಶೀಘ್ರದಲ್ಲಿಯೇ ಶಾಸಕ ಗಣೇಶ್​ನನ್ನು ಬಂಧಿಸಲಾಗುವುದು. ಶಾಸಕ ಗಣೇಶ್​ ಮೇಲೆ ರೌಡಿಶೀಟರ್ ಓಪನ್ ಮಾಡುವ ಬಗ್ಗೆ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಔರಾದ್ಕರ್ ವರದಿ ಜಾರಿ ವಿಚಾರವಾಗಿಯೂ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಬಳಿ ಚರ್ಚೆ ಮಾಡಿದ್ದೇನೆ. ವರದಿ ಜಾರಿ ಮಾಡಲು ಪ್ರಯತ್ನ ಮಾಡುತ್ತೇವೆ. ಬಜೆಟ್​ನಲ್ಲಿ ವರದಿ ಅಂಶಗಳನ್ನ ಸೇರಿಸಿದ್ದೇವೆ. ಸಾಧ್ಯವಾದಷ್ಟು ವರದಿಯಲ್ಲಿನ ಎಲ್ಲಾ ಅಂಶಗಳನ್ನೂ ಜಾರಿ ಮಾಡುತ್ತೇವೆ ಎಂದು ಗೃಹ ಸಚಿವರು ಹೇಳಿದರು.

Comments are closed.