ಕರ್ನಾಟಕ

ಸಮ್ಮಿಶ್ರ ಸರ್ಕಾರವನ್ನು ಬೀಳೀಸೋದಾದರೆ ಒಮ್ಮೆಗೆ ಬೀಳಿಸಲಿ; ಬಿಜೆಪಿಗೆ ಜೆಡಿಎಸ್ ಹಿರಿಯ ಮುಖಂಡ ಹೊರಟ್ಟಿ ಟಾಂಗ್!

Pinterest LinkedIn Tumblr


ಧಾರವಾಡ: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳೀಸೋದಾದರೆ ಒಮ್ಮೆಯೇ ಬೀಳಿಸಲಿ. ಅದನ್ನು ಬಿಟ್ಟು ಪದೇ, ಪದೇ ಈ ರೀತಿ ಹೆಸರಿಸುವುದು ಸರಿಯಲ್ಲ. ಇದು ಅಸಹ್ಯ ಬೆಳವಣಿಗೆ.ಎಂದು ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂಬ ಸುದ್ದಿ ದಟ್ಟವಾಗಿ ಹರಡಿದ್ದರೆ, ಮತ್ತೊಂದೆಡೆ ಬಿಜೆಪಿಯ ಎಲ್ಲಾ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಮೈತ್ರಿ ಸರ್ಕಾರದ ಕೆಲವು ಅತೃಪ್ತ ಶಾಸಕರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಎಂಬ ಸುದ್ದಿ ಕಾಂಗ್ರೆಸ್, ಜೆಡಿಎಸ್ ಪಾಳಯಕ್ಕೆ ಮತ್ತೆ ಇಕ್ಕಟ್ಟಿನ ಸ್ಥಿತಿ ತಂದಿಟ್ಟಿದೆ.

ಈ ಹಿನ್ನೆಲೆಯಲ್ಲಿ ರಾಜಕೀಯ ಬೆಳವಣಿಗೆ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಹೊರಟ್ಟಿ, ಸರ್ಕಾರ ಬೀಳಿಸುವುದಿದ್ದರೆ ಒಂದೇ ಬಾರಿಗೆ ಬೀಳಿಸಬೇಕು. ಏನೂ ಮಾಡಲಿಕ್ಕೆ ಆಗದಿದ್ದ ಮೇಲೆ ಸುಮ್ಮನೆ ಸರ್ಕಾರ ನಡೆಸುವುದಕ್ಕೆ ಬಿಡಬೇಕು ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನವರು ಬಿಜೆಪಿಗೆ ಹೋಗಿ ಏನ್ ಮಾಡ್ತಾರೆ. ಒಂದು ಪಕ್ಷದಿಂದ ಗೆದ್ದು ಇನ್ನೊಂದು ಪಕ್ಷಕ್ಕೆ ಹೇಗೆ ಹೋಗುತ್ತಾರೆ. ಅನಾವಶ್ಯಕ ಆಪರೇಶನ್ ಕಮಲ ಅಂತ ಹಗಲುಗನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.

Comments are closed.