ಕರ್ನಾಟಕ

ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತೆರೆಯಲು ಸರ್ಕಾರ ಬದ್ಧ

Pinterest LinkedIn Tumblr


ಬೆಂಗಳೂರು: “ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತೆರೆಯಲು ಮೈತ್ರಿ ಸರ್ಕಾರ ಸಂಪೂರ್ಣ ಬದ್ಧವಿದೆ’ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ತಿಳಿಸಿದರು.

ನಗರದ ಸಿರ್ಸಿ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ ಮಾತನಾಡಿದ ಅವರು, “ಕನ್ನಡ ನಾಡಿನ ಭಾಷೆ ಅದನ್ನು ಎಂದಿಗೂ ಕಡೆಗಣಿಸಲು ಸಾಧ್ಯವಿಲ್ಲ. ಆದರೆ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಇಂಗ್ಲಿಷ್‌ ಜ್ಞಾನ ಅಗತ್ಯವಿದೆ.

ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಬೇರೆ ರಾಜ್ಯ, ರಾಷ್ಟ್ರಗಳಿಗೆ ತೆರಳಿದಾಗ ಅವರಿಗೆ ಇಂಗ್ಲಿಷ್‌ ಅತ್ಯಂತ ಅವಶ್ಯಕ ಭಾಷೆಯಾಗಿ ಕಾಡುತ್ತದೆ. ಇಂತಹ ಪ್ರಮುಖ ಅಂಶಗಳನ್ನು ಪರಿಗಣನೆ ಮಾಡಿ ಇಂಗ್ಲಿಷ್‌ ಮಾಧ್ಯಮ ಶಾಲೆ ತೆರೆಯಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯವಿರುತ್ತದೆ. ಕೆಲವರು ಅವರ ಅಭಿಪ್ರಾಯ ಹೊರಹಾಕುವ ಮೂಲಕ ವಿರೋಧಿಸಿದ್ದಾರೆ ಎಂದು ಹೇಳಿದರು.

Comments are closed.