ಕರ್ನಾಟಕ

ಆನ್​ಲೈನ್​ಲ್ಲಿ ಸೀರೆ ಬುಕ್! ಬಂದ ಪಾರ್ಸನಲ್ಲಿ ಏನಿತ್ತು ಗೊತ್ತಾ ?

Pinterest LinkedIn Tumblr


ವಿಜಯಪುರ: ಆನ್​​ಲೈನ್ ನಲ್ಲಿ ಕಂಪನಿಯೊಂದು ಬುಕ್ ಮಾಡಿದ ಗ್ರಾಹಕ ವಂಚಿಸಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ನಿವಾಸಿ ಸಿದ್ದರಾಜ ಹೊಳಿ ಆನ್​ಲೈನ್ ನಲ್ಲಿ ಸೀರೆ ಬುಕ್ ಮಾಡಿದ್ದರು. ಅದರಂತೆ ಬಂದ ಕೊರಿಯರ್ ಪಾರ್ಸಲ್ ನೋಡಿ ಈ ಗ್ರಾಹಕ ಬೆಚ್ಚಿ ಬಿದ್ದಿದ್ದಾರೆ.

ಅವರಿಗೆ ಸೀರೆಯ ಬದಲು ಬಂದಿದ್ದು ಮಾತ್ರ ಚಿಂದಿ ಬಟ್ಟೆ. ಆನ್​​ಲೈನ್ ಕಂಪನಿಯ ವಂಚನೆಯಿಂದ ಸೀರೆ ಬದಲು ಬಂದ ಚಿಂದಿ ನೋಡಿ ಈ ವ್ಯಕ್ತಿ ಶಾಕ್ ಆಗಿದ್ದಾರೆ. ಪತ್ನಿಗೆ ಹೊಸ ವರ್ಷಕ್ಕೆ ಸೀರೆ ಕೊಡಿಸಲೆಂದು ಆನ್​ಲೈನ್ ನಲ್ಲಿ ಬುಕ್ ಮಾಡಿದ್ದ ಸಿದ್ದರಾಜ ಹೊಳಿ ಗುಜರಾತ ಮೂಲದ ಬ್ಲೂ ಲೇಡಿ ಡಾಟ್ ಇನ್ ನಲ್ಲಿ 650 ರೂಪಾಯಿ ನೀಡಿ ಉತ್ತಮ ಗುಣಮಟ್ಟದ ಸೀರೆ ಬುಕ್ ಮಾಡಿದ್ದರು ಎನ್ನಲಾಗಿದೆ.

ಸೀರೆ ಬದಲಿಗೆ ಹರಿದ ಚಿಂದಿ ಬಟ್ಟೆಗಳನ್ನು ಪ್ಯಾಕ್ ಮಾಡಿ ಕಳುಹಿಸಿದ ಬ್ಲೂ ಲೇಡಿ ಡಾಟ್ ಇನ್ ಮಾರ್ಕೆಟಿಂಗ್ ಕಂಪನಿ ವಿರುದ್ಧ ಈಗ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನ್​ಲೈನ್​ಲ್ಲಿ ಬುಕ್ ಮಾಡಿ ಮೋಸ ಹೋದ ಗ್ರಾಹಕ ಸಿದ್ದರಾಜ ಹೊಳಿ ಈಗ ಬ್ಲೂ ಲೇಡಿ ಕಂಪನಿಯಿಂದ ತಮಗಾದ ವಂಚನೆಯ ಕುರಿತು ಗ್ರಾಹಕ ವೇದಿಕೆಗೆ ದೂರು ನೀಡಲು ಮುಂದಾಗಿದ್ದಾರೆ.

Comments are closed.