ಕರ್ನಾಟಕ

ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಮುಂದಾದರೆ ಗೋಕಾಕ ಮಾದರಿ ಚಳವಳಿ

Pinterest LinkedIn Tumblr

ಧಾರವಾಡ: ರಾಜ್ಯ ಸರ್ಕಾರವು ಕನ್ನಡದ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಮುಂದಾದರೆ ಮತ್ತೆ ಗೋಕಾಕ ಮಾದರಿ ಚಳವಳಿ ಆರಂಭಿಸಲಾಗುತ್ತದೆ ಎಂದು ಕವಿಸಂ ಅಧ್ಯಕ್ಷ, ನಾಡೋಜ ಡಾ.ಪಾಟೀಲ ಪುಟ್ಟಪ್ಪ ಎಚ್ಚರಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಮತ್ತೆ ಚಳವಳಿ ಆರಂಭಕ್ಕೆ ಸರ್ಕಾರ ಅವಕಾಶ ಕೊಡಬಾರದು. ಇಲ್ಲವಾದರೆ ರಾಜ್ಯಾದ್ಯಂತ ಜನಾಂದೋಲನ ಹೋರಾಟ ಸರ್ಕಾರ ಎದುರಿಸಬೇಕಾಗುತ್ತದೆ. 6ನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್‌ ಕಲಿಸಲು ಅಭ್ಯಂತರವಿಲ್ಲ. ಪ್ರಾಥಮಿಕ ಹಂತದಿಂದ ಕನ್ನಡ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಬೇಡ ಎಂದರು.

ದೇಸಿ ಭಾಷೆ ಬಗ್ಗೆ ಸರ್ಕಾರ ಆದ್ಯತೆ ನೀಡಬೇಕು. ಕನ್ನಡ ಭಾಷೆ ಉಳಿವಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಬದ್ಧವಾಗಿದ್ದು, ಧಾರವಾಡದಲ್ಲಿ ನಡೆಯುವ ಸಾಹಿತ್ಯ ಸಮೇ¾ಳನದಲ್ಲಿ ಈ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಆಂಗ್ಲ ಮಾಧ್ಯಮ ಆರಂಭ ನಿರ್ಧಾರ ಕೈಬಿಡಬೇಕು. ಇಲ್ಲವಾದರೆ ಕನ್ನಡಿಗರ ಆಕ್ರೋಶಕ್ಕೆ ಹಾಗೂ ಜನಾಂದೋಲನ ಹೋರಾಟ ಎದುರಿಸಲು ಸರ್ಕಾರ ಸಿದ್ಧವಾಗಬೇಕು ಎಂದು ಎಚ್ಚರಿಕೆ ನೀಡಿದರು.

ಆರಂಭದಿಂದ ಇಂಗ್ಲಿಷ್‌ ಕಲಿಕೆಗೆ ವಿರೋಧವಿದೆ. ಸರ್ಕಾರ ಸರಿಯಾದ ಸಲಹೆ ಪಡೆದಿಲ್ಲ. ದೇಶಿಯ ಭಾಷೆ ಉಳಿವು ಅಗತ್ಯ. ಮೊದಲು ಜನ ಕನ್ನಡ ಕಲಿಯಲಿ. ಏಕಪಕ್ಷೀಯ ನಿರ್ಧಾರ ಸರಿಯಲ್ಲ. ಕನ್ನಡ ಪಾಂಡಿತ್ಯ ಬಲ್ಲವರು ಇಂಗ್ಲಿಷ್‌ ಕಲಿಕೆಗೆ ಒತ್ತು ನೀಡುವುದು ಯಾವ ನ್ಯಾಯ? ಇಂಗ್ಲಿಷ್‌ ಭಾಷೆಯಲ್ಲಿ ಶಿಕ್ಷಣ ಪಡೆಯಬೇಕಾದರೆ ಅವರು ಇಂಗ್ಲೆಂಡ್‌, ಅಮೆರಿಕ ಹೋಗಲಿ ಎಂದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಉದೇªಶಿರುವ ಆಂಗ್ಲ ಮಾಧ್ಯಮ ಶಾಲೆ ಕ್ರಮಕ್ಕೆ ನಮ್ಮ ವಿರೋಧ ಇದೆ. ಸಮಿಶ್ರ ಸರ್ಕಾರದ ನಿಲುವು ಖಂಡಿಸುತ್ತೇವೆ. ಆರನೇ ತರಗತಿಯಿಂದ ಇಂಗ್ಲಿಷ್‌ ಒಂದು ಭಾಷೆಯಾಗಿ ಕಲಿಸಿ. ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಕನ್ನಡ ಭಾಷೆಯಲ್ಲಿಯೇ ಶಿಕ್ಷಣ ಕಲಿಸಿರಿ.
– ನಾಡೋಜ ಡಾ.ಪಾಟೀಲ ಪುಟ್ಟಪ್ಪ, ಕವಿಸಂ ಅಧ್ಯಕ್ಷ

Comments are closed.