ಕರ್ನಾಟಕ

28 ಕೋಟಿ ರೂ. ಬೆಲೆಬಾಳುವ ಅತ್ಯಂತ ದುಬಾರಿ ಕಾರು ಬಳಸೋ ಪೊಲೀಸರು ಯಾರು?

Pinterest LinkedIn Tumblr


ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನ, ಬಲಿಷ್ಠ ಎಂಜಿನ್, ಗರಿಷ್ಠ ಸುರಕ್ಷತೆ ಕಾರುಗಳು ಪೊಲೀಸರಿಗೆ ಅಗತ್ಯ. ಹಲವು ದೇಶಗಳ ಪೊಲೀಸರು ದುಬಾರಿ, ಆಧುನಿಕ ಕಾರುಗಳನ್ನ ಬಳಸುತ್ತಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಇಟಲಿ ಸೇರಿದಂತೆ ಹಲವು ದೇಶಗಳು ಗರಿಷ್ಠ ಬೆಲೆಯ ಕಾರುಗಳನ್ನ ಬಳಸುತ್ತಾರೆ. ಆದರೆ ದುಬೈ ಪೊಲೀಸರು ವಿಶ್ವದ ಅತ್ಯಂತ ದುಬಾರಿ ಕಾರು ಬಳಸುತ್ತಾರೆ.

ಅಧುನಿಕ ತಂತ್ರಜ್ಞಾನ, ದುಬಾರಿ ಬೈಕ್, ಕಾರುಗಳನ್ನ ಬಳಸುವುದರಲ್ಲಿ ದುಬೈ ಪೊಲೀಸರು ಎತ್ತಿದ ಕೈ. ವಿಶ್ವದಲ್ಲೇ ಮೊದಲ ಬಾರಿಗೆ ಹೂವರ್ ಹಾರುವ ಬೈಕ್ ಬಳಸಿದ ಕೀರ್ತಿಗೆ ಇದೇ ದುಬೈ ಪೋಲೀಸರು ಪಾತ್ರರಾಗಿದ್ದಾರೆ. ಇನ್ನು ಕಾರಿನ ವಿಚಾರದಲ್ಲೂ ದುಬೈ ಪೊಲೀಸರನ್ನ ಮೀರಿಸುವುದು ಕಷ್ಟ. ಯಾಕೆಂದರೆ ದುಬೈ ಪೊಲೀಸರು ಬುಗಾಟಿ ವೆಯ್ರಾನ್ ಕಾರು ಬಳಸುತ್ತಾರೆ.

ವೆಯ್ರಾನ್ ಕಾರಿನ ಬೆಲೆ ಸರಿ ಸುಮಾರು 29 ಕೋಟಿ ರೂಪಾಯಿ. ಈ ಕಾರು ಒಂದು ಗಂಟೆಯಲ್ಲಿ 430 ಕಿ.ಮೀ ದೂರ ಚಲಿಸಲಿದೆ. ಗರಿಷ್ಠ ಭದ್ರತೆಯುಳ್ಳ ಸೂಪರ್ ಕಾರು ದುಬೈ ಪೊಲೀಸರಿಗೆ ಅಗತ್ಯ. ದುಬೈನ ಚಾಲಾಕಿ ಕಳ್ಳರನ್ನ ಹಿಡಿಯಲು ಈ ಸೂಪರ್ ಕಾರು ಅಗತ್ಯ.

Comments are closed.