ಕರ್ನಾಟಕ

ಡಿಕೆಶಿ​ಗೆ 2 ತಾಸು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಡ್ರಿಲ್​

Pinterest LinkedIn Tumblr


ರಾಮನಗರ: ಸ್ಯಾಂಡಲ್​ವುಡ್​ ತಾರೆಯರ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸುವ ಮೂಲಕ ಬಿಗ್​ ಶಾಕ್​ ನೀಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತ ಸಚಿವ ಡಿಕೆ ಶಿವಕುಮಾರ್​ಗೂ ಈ ಬಿಸಿ ತಗಲುವಂತೆ ಮಾಡಿದ್ದಾರೆ.

ಸಚಿವ ಡಿಕೆ ಶಿವಕುಮಾರ್​ ಅವರ ಮನೆ ಮೇಲೆ ಈ ಹಿಂದೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅವರ ತಾಯಿ ವಿಚಾರಣೆಗೆ ಹಾಜರಾಗಿಲ್ಲ ಎಂದು ಅವರಿಗೆ ನೋಟಿಸ್​ ಜಾರಿ ಮಾಡಿದ್ಧಾರೆ.

ತಾಯಿಗೆ ನೋಟಿಸ್​ ಜಾರಿ ಮಾಡುತ್ತಿದ್ದಂತೆ ಆದಾಯ ಇಲಾಖೆ ಮುಖ್ಯ ಕಚೇರಿಗೆ ಸಚಿವ ಡಿಕೆ ಶಿವಕುಮಾರ್​ ಧಾವಿಸಿದ್ದಾರೆ. ಈ ವೇಳೆ ಎರಡು ಗಂಟೆಗಳ ಕಾಲ ಅಧಿಕಾರಿಗಳು ಸಚಿವರನ್ನು ವಿಚಾರಣೆ ನಡೆಸಿದ್ದಾರೆ.

ಈ ಹಿಂದೆ ಐಟಿ ದಾಳಿ ಸಮಯದಲ್ಲಿ ವಶಕ್ಕೆ ಪಡೆಯಲಾಗಿದ್ದ ಕಡತ ಹಾಗೂ ಹಣದ ಕುರಿತು ಮಾಹಿತಿಯ ಕುರಿತು ಅಧಿಕಾರಿಗಳು ಸಚಿವ ಡಿಕೆ ಶಿವಕುಮಾರ್​ರನ್ನು ಸುದೀರ್ಘ ವಿಚಾರಣೆ ನಡೆಸಿದರು. ಈ ವೇಳೆ ಪ್ರಕರಣದ ಎ 2 ಆರೋಪಿಯಾಗಿರುವ ಉದ್ಯಮಿ ಸಚಿನ್ ನಾರಾಯಣನ್​ ಕೂಡ ಹಾಜರಿದ್ದರು.

ಡಿಕೆಶಿ ತಾಯಿಗೂ ನೋಟಿಸ್​

ದಾಳಿ ನಡೆಸಿದ ಸಂದರ್ಭದಲ್ಲಿ ಡಿಕೆ ಶಿವಕುಮಾರ್​ ಅವರಿಗೆ ಕುಟುಂಬ ಸಮೇತ ವಿಚಾರಣೆಗೆ ಹಾಜರಾಗುವಂತೆ ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಡಿಕೆ ಶಿವಕುಮಾರ್​ ಕುಟುಂಬ ಕೂಡ ಹಾಜರಾಗಿತ್ತು. ಈ ವೇಳೆ ಅವರ ಡಿಕೆ ಶಿವಕುಮಾರ್​ ಅವರ ತಾಯಿ ಗೈರಾಗಿದ್ದರು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ನೋಟಿಸ್​ ಜಾರಿ ಮಾಡಿದ್ದಾರೆ.

ಗೌರಮ್ಮ ಅವರ ಮನೆ ಮುಂದೆ ನೋಟಿಸ್​ ಅಂಟಿಸಿರುವ ಚಿತ್ರ
ಗೌರಮ್ಮ ಅವರು ವಾಸವಾಗಿರುವ ಜಿಲ್ಲೆಯ ಕನಕಪುರದ ತಾಲೂಕಿನ ಆವಲಹಳ್ಳಿ ಮನೆಗೆ ನೋಟಿಸ್​ ಜಾರಿ ಮಾಡಲಾಗಿದೆ. ಈ ವೇಳೆ ಗೌರಮ್ಮ ಅವರು ಮನೆಯಲ್ಲಿ ಇಲ್ಲದ ಕಾರಣ ಅವರ ಮನೆಗೆ ಬಾಗಿಲಿಗೆ ಈ ನೋಟಿಸ್​ ಅಂಟಿಸಲಾಗಿದೆ.

ಈ ಕುರಿತು ಮಾತನಾಡಿರುವ ಸಚಿವರು, ‘ಈ ಹಿಂದೆ ಕೂಡ ಅಧಿಕಾರಿಗಳ ಸೂಚನೆಯಂತೆ ಹಾಜರಾಗಿದ್ದು, ನನ್ನ ಕುಟುಂಬದವರು ಸಹಕಾರ ನೀಡಿದ್ದೇವೆ’ ಎಂದು ಈ ವೇಳೆ ತಿಳಿಸಿದ್ದಾರೆ.

2017ರ ನವೆಂಬರ್ 6 ರಂದು ಡಿಕೆ ಶಿವಕುಮಾರ್ ಅವರಿಗೆ ಕುಟುಂಬ ಸಮೇತರಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತು. ಇದರಂತೆ ಡಿಕೆ ಶಿವಕುಮಾರ್​, ಅವರ ಹೆಂಡತಿ, ಮಕ್ಕಳು, ತಮ್ಮ ಡಿಕೆ ಸುರೇಶ್​ ಹಾಗೂ ತಾಯಿ ಸೇರಿದಂತೆ ಕುಟುಂಬ ಸದಸ್ಯರು ವಿಚಾರಣೆಗೆ ಹಾಜರಾಗಿದ್ದರು.

Comments are closed.