ಕರ್ನಾಟಕ

ನೀವು ಹುಚ್ಚರಿದ್ದೀರಿ… ನಿಮ್ಮನ್ನು ಜಾಡಿಸಿ ಒದಿಯಬೇಕು ಅತಿಯಾಯ್ತು ನಿಮ್ಮದು: ಮಾಧ್ಯಮದವರ ವಿರುದ್ಧ ಹರಿಹಾಯ್ದ ರಮೇಶ್ ಆವಾಜ್

Pinterest LinkedIn Tumblr

ಬೆಳಗಾವಿ: ನೀವು ಹುಚ್ಚರಿದ್ದೀರಿ, ನಿಮ್ಮನ್ನು ಒದಿಯಬೇಕು, ಜಾಡಿಸಿ ಒದಿಯಬೇಕು ಅತಿಯಾಯ್ತು ನಿಮ್ಮದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದಾರೆ.

ಕಳೆದ ಎಂಟು ದಿನಗಳಿಂದ ಸ್ವತಃ ಕಾಂಗ್ರೆಸ್​ನವರಿಗೇ ಸಿಗದೆ ಕಣ್ಮರೆಯಾಗಿದ್ದ ರಮೇಶ್​ ಜಾರಕಿಹೊಳಿ ಗೋಕಾಕ್​ ಮಿಲ್​ನಲ್ಲಿರುವ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಡಿ ನಿವಾಸಕ್ಕೆ ಹಿಂದಿರುಗುವಾಗ ಪ್ರತ್ಯಕ್ಷರಾಗಿದ್ದರು.

ವರದಿಗಾರರು ರಮೇಶ್​ ಅವರ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ಪ್ರತಿಕ್ರಿಯೆ ಕೇಳಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಕಾರಿನಿಂದ ಇಳಿಯುತ್ತಿದ್ದಂತೆ ಮಾಧ್ಯಮದವರ ವಿರುದ್ಧ ಈ ರೀತಿ ಗರಂ ಆಗಿ ಮಾತನಾಡಿ, ಯಾವುದೇ ಪ್ರತಿಕ್ರಿಯೆ ನೀಡದೆ ಮನೆಯೊಳಕ್ಕೆ ತೆರಳಿದ್ದಾರೆ.

Comments are closed.