ಕರ್ನಾಟಕ

ಅಮಾಯಕರಿಗೆ ಸೇರಿದ 310 ಎಕರೆ ಭೂ ಒತ್ತುವರಿಗೆ ಮುಂದಾಗಿದ್ದ ಹರಿಖೋಡೆ ಕುಟುಂಬ..!

Pinterest LinkedIn Tumblr


ಬೆಂಗಳೂರು: ಲಿಕ್ಕರ್ ಟೈಕೂನ್, ಮದ್ಯದ ದೊರೆ, ಒಂದು ಕಾಲದಲ್ಲಿ ಸರ್ಕಾರಗಳನ್ನೇ ತನ್ನ ಬೆರಳುಗಳ ಸನ್ನೆಯಲ್ಲಿ ಆಡಿಸ್ತಿದ್ದ ಹರಿಖೋಡೆ ಕುಟುಂಬದ ವಿರುದ್ಧ ಭೂ ಕಬಳಿಕೆಯ ಗಂಭೀರ ಆರೋಪ ಕೇಳಿಬಂದಿದೆ. ಈ ರೀತಿಯ ಆರೋಪ ಮಾಡುತ್ತಿರುವುದು ಭೂಮಿಯ ನೈಜ ಮಾಲೀಕರೆಂದು ಘೋಷಿಸಿಕೊಂಡಿರುವ ಇಬ್ಬರು ವೃದ್ಧ ಸಹೋದರಿಯರು.

ಕೆಂಗೇರಿ ಹೋಬಳಿಯ ಸರ್ವೆ ನಂಬರ್ 137 ರ ವ್ಯಾಪ್ತಿಯಲ್ಲಿರುವ ತಮ್ಮ ಮಾಲೀಕತ್ವದ 285 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಬೇಲಿ ಸುತ್ತೊಕ್ಕೆ ಖೋಡೆ ಕುಟುಂಬ ತಂತ್ರ ರೂಪಿಸಿದೆ ಎಂದು ಮೋಟಮ್ಮ,ನಾಗಮ್ಮ ಎನ್ನುವ ವೃದ್ದ ಸಹೋದರಿಯರಿಬ್ಬರು ಆಪಾದಿಸಿದ್ದಾರೆ.

ಇತಿಹಾಸ ಪ್ರಸಿದ್ಧ ಕನ್ನಂಬಾಡಿ ಕಟ್ಟೆ ನಿರ್ಮಾಣದಲ್ಲಿ ಕೆಲಸ ಮಾಡಿದ್ದ ತಮ್ಮ ತಂದೆ ಈರಪ್ಪ ದುಡಿಮೆಯಿಂದ ಬಂದ ಹಣದ ಪೈಕಿ 1940ರಲ್ಲಿಯೇ 100 ರೂ ಕೊಟ್ಟು 310 ಎಕರೆ ಭೂಮಿಯನ್ನು ಖರೀದಿಸಲಾಗಿತ್ತು. ಸೂಡ್ರಳ್ಳಿ ಗ್ರಾಮಸ್ಥರಾದ ನಾಸಿ ದೇವರ ಮಗ ಮರಿಯಪ್ಪ ದೊಡ್ಡ ಹನುಮಯ್ಯ ,ಈರ್ ಮುನಿಯಪ್ಪ ಎನ್ನುವವರಿಂದ ಭೂಮಿ ಖರೀದಿ ಮಾಡಲಾಗಿತ್ತು, ಇದಕ್ಕು ಮುನ್ನ ಈ ಭೂಮಿ ಪುಟ್ಟಣ್ಣ ಎನ್ನುವವರಿಗೆ ಸೇರಿತ್ತು. ಬಳಿಕ ನೊಂದಾಯಿತ ಕ್ರಯ ಪತ್ರದ ಮೂಲಕವೇ ಖರೀದಿ ಪ್ರಕ್ರಿಯೆ ನಡೆದಿತ್ತು ಎನ್ನಲಾಗಿದೆ.

ವಿಪರ್ಯಾಸ ಎಂದರೇ, ಈರಪ್ಪ ಕಾಲಾನಂತರ ಖಾತೆ ಬದಲಾವಣೆ ಮಾಡೋದನ್ನು ಅವರ ಕುಟುಂಬ ಮರೆತು ಹೋಗಿತ್ತು. ಪರಿಸ್ತಿತಿಯ ದುರ್ಲಾಭ ಪಡೆದುಕೊಂಡ ಹರಿಖೋಡೆ ಎಲ್ಲಾ 310 ಎಕರೆಗೆ ಕೊಟ್ಟ ದಾಖಲೆ ಸೃಷ್ಟಿಸಿ ಭೂಮಿ ಮೇಲೆ ಹಕ್ಕನ್ನು ಪ್ರತಿದಿಸುತ್ತಿದ್ಧಾರೆ. ತಕ್ಷಣ ಎಚ್ಚೆತ್ತುಕೊಂಡ ಈರಪ್ಪರ ಸಹೋದರಿಯರಿಬ್ಬರು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ಧಾರೆ. 2016ರಲ್ಲಿ ಹೈಕೋರ್ಟ್​ ಪ್ರಕರಣವನ್ನು ಕೂಡಲೇ ಇತ್ಯರ್ಥ ಪಡಿಸುವಂತೆ ಆದೇಶಿತ್ತು.

ಇದರ ಅನ್ವಯ ವಿಶೇಷ ಜಿಲ್ಲಾಧಿಕಾರಿ ರಂಗಪ್ಪ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದಾಗ ಖೋಡೆ ಕುಟುಂಬ 310 ಎಕರೆ ಮೇಲಿನ ಹಕ್ಕನ್ನು ಪ್ರತಿಪಾದಿಸುವಲ್ಲಿ ವಿಫಲವಾಗುತ್ತೆ. ಕೊಟ್ಟ ಗಡುವಿನೊಳಗೆ ಮಾಲೀಕತ್ವದ ಅಸಲಿ ಕಡತಗಳನ್ನು ನೀಡುವಲ್ಲಿ ವಿಫಲವಾಗಿದ್ದರಿಂದ ವಿಶೇಷ ಜಿಲ್ಲಾಧಿಕಾರಿ ರಂಗಪ್ಪ, ಖೋಡೆ ಕುಟುಂಬ ನಕಲಿ ದಾಖಲೆ ಸೃಷ್ಟಿಸಿದೆ. ಭೂಮಿ ಮೇಲಿನ ಹಕ್ಕನ್ನು ಪ್ರತಿಪಾದಿಸಲಿಕ್ಕಾಗಿಯೇ ಈ ಕೆಲಸಕ್ಕೆ ಮುಂದಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಹೀಗಿದ್ದರೂ ಶಾಸಕ ಎ.ಟಿ ರಾಮಸ್ವಾಮಿ ಒಟ್ಟಾರೆ ಪ್ರಕರಣದಲ್ಲಿ ಖೋಡೆ ಪರವಾಗಿ ತೀರ್ಪು ನೀಡಿದ್ದಾರೆ ಎಂದು ಅಧಿವೇಶನದಲ್ಲಿ ಚರ್ಚೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಪ್ರಕರಣದ ಸತ್ಯಾಂಶ ಗೊತ್ತಾದ ಮೇಲೆಯೂ ಏಕೆ ತಪ್ಪು ಮಾಹಿತಿ ಕೊಡಲಿಕ್ಕೆ ಪ್ರಯತ್ನಿಸಿದರು. ರಂಗಪ್ಪ ಅಮಾನತು ಆಗಲೇಬೇಕೆಂದು ಪಟ್ಟು ಹಿಡಿದರು ಎನ್ನುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

Comments are closed.