ಕರ್ನಾಟಕ

ಬಿಳಿಯನ್ನು ಕರಿ, ಕರಿಯನ್ನು ಬಿಳಿ ಮಾಡಲಿಕ್ಕೆ ಆಗುತ್ತದೆಯೇ: ಸಿದ್ದರಾಮಯ್ಯ

Pinterest LinkedIn Tumblr


ಬೆಳಗಾವಿ: ನಾನು ಯಡಿಯೂರಪ್ಪನವರ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಕೊಡುವುದಿಲ್ಲ. ಅವರು ಸತ್ಯ ಹೇಳುವುದಿಲ್ಲ. ಇತ್ತೀಚೆಗೆ ಬಹಳ ಜಾಸ್ತಿನೇ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ. ಅವರಿಗೆ ಜನರು ಬಹುಮತ ಕೊಟ್ಟಿಲ್ಲಾ , ಹೇಗೆ ಅಧಿಕಾರಕ್ಕೆ ಬರುವುದು. ಬಿಳೀದು ಕರಿ , ಕರೀದು ಬಿಳಿ ಮಾಡ್ಲಿಕ್ಕೆ ಆಗುತ್ತದಾ ಎಂದು ಪ್ರಶ್ನಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ರಮೇಶ್‌ ಜಾರಕಿಹೊಳಿ ಮತ್ತು ಬಿ.ಸಿ.ಪಾಟೀಲ್‌ ಅವರಿಗೆ ಅಸಮಾಧಾನ ಇದೆ. ನಾನು ಮಾತುಕತೆ ನಡೆಸುತ್ತೇನೆ.ಆದರೆ ಈ ವಿಚಾರದಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದರು.

ರಾಹುಲ್‌ ಗಾಂಧಿ ಅವರು ಕರ್ನಾಟಕದಿಂದ ಈ ಬಾರಿ ಕಣಕ್ಕಿಳಿಯುವುದಿಲ್ಲ. ಅವರು ಅಮೇಠಿಯಿಂದಲೇ ಸ್ಪರ್ಧಿಸುತ್ತಾರೆ ಎಂದರು.

Comments are closed.