ಕರ್ನಾಟಕ

ವಿಷ ಪ್ರಸಾದ: ಡಿಸ್ಚಾರ್ಜ್‌ ಮಾಡಲ್ಪಟ್ಟವರು ಮತ್ತೆ ಆಸ್ಪತ್ರೆಗೆ; ಆತಂಕ

Pinterest LinkedIn Tumblr


ಮೈಸೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದದ ದುರಂತದ ಸರಮಾಲೆ ಮುಂದುವರಿದಿದ್ದು, ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ವಾಪಾಸಾದ ಕೆಲವರು ಮತ್ತೆ ಅಸ್ವಸ್ಥರಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಮೃತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿಸಿ ಮನೆಗೆ ವಾಪಾಸಾಗಿದ್ದ ಎಂ.ಜಿ.ದೊಡ್ಡಿ ಗ್ರಾಮದ ಮಾದ , ಮಾದಮ್ಮ ಮತ್ತು ಪಳನಿಯಮ್ಮ ಎನ್ನುವ ಮೂವರು ತೀವ್ರ ಹೊಟ್ಟೆ ನೋವಿನಿಂದ ಬಳಲಿ ಮತ್ತೆ ಅಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಚಿಕಿತ್ಸೆ ಪಡೆದು ಮನೆಗಳಿಗೆ ಮರಳಿದವರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಆರೋಪಿಗಳು ಮೈಸೂರು ಜೈಲಿಗೆ
ಇದೇ ವೇಳೆ ಪ್ರಕರಣದ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ (53), ಅಂಬಿಕಾ (40), ದೊಡ್ಡಯ್ಯ (35) ಮತ್ತು ಮಾದೇಶ್‌ (44)ನನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಗೆ ಜ. 3ರವರೆಗೆ
ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಆರೋಪಿಗಳನ್ನು ಮೈಸೂರಿನ ಕಾರಾಗೃಹದಲ್ಲಿರಿಸಲಾಗಿದೆ.

Comments are closed.