ಕರ್ನಾಟಕ

ಮುಂದುವರಿದ ಗೊಂದಲ; ನಾಳೆ ಸಂಪುಟ ವಿಸ್ತರಣೆ ಡೌಟ್‌ ?

Pinterest LinkedIn Tumblr

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲು ಮುಂದಾಗಿರುವ ಕಾಂಗ್ರೆಸ್‌ಗೆ ಭಾರೀ ಸವಾಲುಗಳು ಎದುರಾಗಿದ್ದು, ಡಿಸೆಂಬರ್‌ 22 ರಂದು ವಿಸ್ತರಣೆ ಮಾಡುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

ನಾಳೆ ದೆಹಲಿಯಲ್ಲಿ ಕಾಂಗ್ರೆಸ್‌ನ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಈ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.ಆದರೆ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಸಚಿವ ಸಂಪುಟ ರಚನೆಯ ಕೆಲಸಗಳಲ್ಲಿ ತೊಡಗಿಕೊಂಡಿರುವ ರಾಹುಲ್‌ ಗಾಂಧಿ ಅವರು ಇನ್ನು ಕೆಲ ದಿನಗಳ ಕಾಲ ಕಾದು ನೋಡಲು ಹೇಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಜಾರಕಿಹೊಳಿಗೆ ಬುಲಾವ್‌
ಬಿಜೆಪಿ ಶಾಸಕರ ಔತಣಕೂಟದಲ್ಲಿ ಭಾಗಿಯಾಗಿರುವ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ಹೈ ಕಮಾಂಡ್‌ ದೆಹಲಿಗೆ ಬರಲು ಹೇಳಿದೆ ಎಂದು ತಿಳಿದು ಬಂದಿದೆ. ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ಕರೆದಿರುವ ಬಗ್ಗೆ ವರದಿಯಾಗಿದೆ.

Comments are closed.