ಕರ್ನಾಟಕ

ನಾಲ್ಕು ತಿಂಗಳು ಕಷ್ಟ ಪಡೋಣ: ಸಂಸದ ಪ್ರತಾಪ್‌

Pinterest LinkedIn Tumblr


ಹೊಸದಿಲ್ಲಿ: ಪಂಚರಾಜ್ಯಗಳ ಚುನಾವಣಾ ಫ‌ಲಿತಾಂಶದಲ್ಲಿ ಬಿಜೆಪಿಗೆ ಸಂಪೂರ್ಣ ಸೋಲು ಅನುಭವಿಸಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲಿನ ಬಿಜೆಪಿ ಕಾರ್ಯಕರ್ತರ ಪ್ರತಿಕ್ರಿಯೆಯ ಕುರಿತು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ ಯಾರೂ ವಿಚಲಿತರಾಗದಂತೆ ಮನವಿ ಮಾಡಿದ್ದಾರೆ.

ಸಂಸದ ಸಿಂಹ ಮಂಗಳವಾರ ರಾತ್ರಿ ಮಾಡಿದ ಪೋಸ್ಟ್‌ ಹೀಗಿದೆ
ಕಾರ್ಯಕರ್ತರೇ ಹಾಗು ಮೋದೀಜಿ ಬೆಂಬಲಿಗರೇ, ಸೋಲು ಖಂಡಿತ ಬೇಸರ ತರುತ್ತೆ. ಆದರೆ ಯಾಕಿಷ್ಟು ವಿಚಲಿತರಾಗಿದ್ದೀರಿ? ಯಾಕಿಂಥ ಭ್ರಮನಿರಸನ? ಜನರನ್ನೇ ದೂಷಿಸುವಂಥ ವೈರಾಗ್ಯದ ಮೆಸೇಜುಗಳೇಕೆ? ಈ ರೀತಿಯ defeatist ಮನಸ್ಥಿತಿ ಯಾಕೆ? 2004ರಿಂದ 2018ರವರೆಗೂ ಸತತ 15 ವರ್ಷ ಇದೇ ಮಧ್ಯಪ್ರದೇಶ, ಛತ್ತೀಸಗಢದ ಜನರಲ್ಲವೇ ಯುಪಿಎ ಆರ್ಭಟದ ನಡುವೆಯೂ ನಮಗೆ ಅಧಿಕಾರ ನೀಡಿದ್ದು? 15 ವರ್ಷ ಒಂದೇ ಮುಖವನ್ನು ನೋಡುತ್ತಾ ಇದ್ದರೆ fatigue ಬಂದು ಸುಖಾಸುಮ್ಮನೆ ಬದಲಾವಣೆ ಬೇಕು ಅನ್ನಿಸಿಬಿಡೋ ಸಾಧ್ಯತೆ ಇರುತ್ತೆ. ಯಾಕೆ ದೂರುತ್ತಾ ಕಾಲಹರಣ ಮಾಡುತ್ತೀರಿ? ಇನ್ನು 4 ತಿಂಗಳು ಕಷ್ಟಪಡೋಣ, ಫೇಸ್ಬುಕ್  ಟ್ವಿಟ್ಟರ್ ವಾಟ್ಸಾಪ್ ಗಳ ಆಚೆಗಿನ ಜನತಾ ನ್ಯಾಯಾಲಯದ ಮುಂದೆ ಹೋಗಿ ಮಾಡಿರುವ ಕೆಲಸಗಳನ್ನ ಮನವರಿಕೆ ಮಾಡಿಕೊಡೋಣ, 2019ರಲ್ಲಿ ಮತ್ತೆ ಮೋದೀಜಿಯನ್ನ ಪ್ರಧಾನಿ ಮಾಡಿ ಖುಷಿಪಡೋಣ. ಎಂದು ಬರೆದಿದ್ದಾರೆ.

Comments are closed.