ಕರ್ನಾಟಕ

ರಿಲಯನ್ಸ್ ಜಿಯೋ ಫೋನ್‌ಗೆ ಸಡ್ಡು ಹೊಡೆಯಲು ಗೂಗಲ್ 4ಜಿ ಫೋನ್: ಬೆಲೆ ಕೇವಲ…!

Pinterest LinkedIn Tumblr


ಬೆಂಗಳೂರು: ರಿಲಯನ್ಸ್ ಜಿಯೋ ಫೋನ್‌ಗೆ ಸಡ್ಡು ಹೊಡೆಯಲು, ಸರ್ಚ್ ಎಂಜಿನ್ ದೈತ್ಯ ಗೂಗಲ್ ಅತಿ ಅಗ್ಗದ ಮೊಬೈಲ್ ಫೋನ್ ಬಿಡುಗಡೆ ಮಾಡಿದೆ. ವಿಝ್‌ಫೋನ್ ಡಬ್ಲ್ಯುಪಿ006 ಎಂಬ ಹೆಸರಿನ ಕಾಯ್ ಓಪರೇಟಿಂಗ್ (KaiOS) ಸಿಸ್ಟಂ ಹೊಂದಿರುವ, ಮೊಬೈಲ್ ಫೋನ್ ಅನ್ನು ಗೂಗಲ್ ಬಿಡುಗಡೆ ಮಾಡಿದೆ.

ಗೂಗಲ್ ವಿಝ್‌ಫೋನ್ ಡಬ್ಲ್ಯುಪಿ006 ಬೆಲೆ ಕೇವಲ 500 ರೂ. ಆಗಿದ್ದು, ಜಿಯೋ ಫೋನ್ ನಲ್ಲಿ ಇರುವಂತೆ ಇದರಲ್ಲಿಯೂ ಕಾಯ್ ಆಪರೇಟಿಂಗ್ ಸಿಸ್ಟಂ ಅಡಕವಾಗಿದೆ.

ನೂತನ ಫೋನ್ ಗೂಗಲ್‌ನ ಜನಪ್ರಿಯ ಗೂಗಲ್ ಅಸಿಸ್ಟನ್ಸ್, ಗೂಗಲ್ ಮ್ಯಾಪ್, ಗೂಗಲ್ ಸರ್ಚ್ ಇತ್ಯಾದಿ ಆ್ಯಪ್‌ಗಳನ್ನು ಹೊಂದಿರುತ್ತದೆ.

ಸದ್ಯ ಇಂಡೋನೇಷ್ಯಾ ಮಾರುಕಟ್ಟೆ ಪ್ರವೇಶಿಸಿರುವ ಫೋನ್, ಭಾರತದಲ್ಲೂ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇದು ಜಿಯೋ ಫೋನ್‌ಗೆ ಸಮಾನವಾಗಿ 4ಜಿ ಸೇವೆಯನ್ನು ಹೊಂದಿರುತ್ತದೆ. ವೈ-ಫೈ, ಬ್ಲೂಟೂತ್ ಹಾಗೂ ಜಿಪಿಎಸ್ ವ್ಯವಸ್ಥೆಯನ್ನು ಕೂಡ ಹೊಂದಿದೆ.

Comments are closed.