ಕರ್ನಾಟಕ

3 ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಜಯ: ಟುಡೇಸ್ ಚಾಣಕ್ಯ ಸಮೀಕ್ಷೆ

Pinterest LinkedIn Tumblr


ಬೆಂಗಳೂರು: 2014 ಲೋಕಸಭಾ ಚುನಾವಣೆಯಲ್ಲಿ ನಿಖರ ಭವಿಷ್ಯ ನುಡಿದಿದ್ದ ಟುಡೇಸ್ ಚಾಣಕ್ಯ ಈ ಬಾರಿ ಮಧ್ಯಪ್ರದೇಶ, ಚತ್ತೀಸ್‍ಗಢ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯಲಿದ್ದು, ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆಗೆ ಬಿಜೆಪಿ ಕೊಚ್ಚಿಹೋಗಲಿದೆ ಎಂದು ತಿಳಿಸಿದೆ.

ಟುಡೇಸ್ ಚಾಣಕ್ಯದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ 125 (± 12), ಬಿಜೆಪಿ 103 (± 12) ಹಾಗೂ ಇತರೇ 2 ರಿಂದ 5 ಸ್ಥಾನ ಗಳಿಸಲಿದೆ ಎಂದು ತಿಳಿಸಿದೆ. ಇದರಲ್ಲಿ ಕಾಂಗ್ರೆಸ್ ಶೇ.45 ರಷ್ಟು ಮತ, ಬಿಜೆಪಿ ಶೇ.41 ಹಾಗೂ ಇತರೇ ಶೇ. 14 ಮತಗಳು ಲಭಿಸಲಿದೆ ಎಂದಿದೆ.

ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ 50 (±8), ಬಿಜೆಪಿ 36 (±8) ಹಾಗೂ ಇತರೇ 4 (±3) ಸ್ಥಾನಗಳು ಪಡೆಯಲಿದೆ. ಮತಗಳಿಕೆಯಲ್ಲಿ ಕಾಂಗ್ರೆಸ್ ಶೇ.42, ಬಿಜೆಪಿ ಶೇ.38 ಹಾಗೂ ಇತರೇ ಶೇ.20 ರಷ್ಟು ಲಭಿಸಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ.

ರಾಜಸ್ತಾನದಲ್ಲಿಯೂ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯಲಿದ್ದು ಎಂದು ಸಮೀಕ್ಷೆ ತಿಳಿಸಿದ್ದು, ಒಟ್ಟು 199 ಸ್ಥಾನಗಳಲ್ಲಿ ಕಾಂಗ್ರೆಸ್ 123 (±12), ಬಿಜೆಪಿ 68 (±12) ಹಾಗೂ ಇತರೆ 8 (±5) ಸ್ಥಾನಗಳು ಪಡೆಯಲಿದೆ. ಮತ ಹಂಚಿಕೆಯಲ್ಲಿ ಕಾಂಗ್ರೆಸ್ ಶೇ.47 (±3), ಬಿಜೆಪಿ ಶೇ.37 (±3) ಹಾಗೂ ಇತರೇ ಶೇ.16 (±3) ಪ್ರಮಾಣದಲ್ಲಿ ಪಡೆಯಲಿವೆ ಎಂದು ತಿಳಿಸಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೂ ಚುನಾವಣೋತ್ತರ ಸಮೀಕ್ಷೆಯಲ್ಲಿ ಟುಡೇಸ್ ಚಾಣಕ್ಯ, ಬಿಜೆಪಿ 120 ±11, ಕಾಂಗ್ರೆಸ್ 73 ±11, ಜೆಡಿಎಸ್ 26 ±7 ಹಾಗೂ ಇತರೇ 3 ±3 ಸಿಗಲಿದೆ ಎಂದು ತಿಳಿಸಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಟುಡೇಸ್ ಚಾಣಕ್ಯ ಬಿಜೆಪಿ 291 ಸ್ಥಾನಗಳಿಸಲಿದೆ ಎಂದು ಹೇಳಿತ್ತು. ಫಲಿತಾಂಶ ಬಂದಾಗ ಬಿಜೆಪಿ 282 ಸ್ಥಾನ ಗೆದ್ದುಕೊಂಡಿತ್ತು. ಆದರೆ ಬಿಹಾರ ಚುನಾವಣೆಯಲ್ಲಿ ಟುಡೇಸ್ ಚಾಣಕ್ಯದ ಲೆಕ್ಕಾಚಾರ ತಲೆಕೆಳಗೆ ಆಗಿತ್ತು. ಬಿಜೆಪಿ ಮೈತ್ರಿಕೂಟ 155 ಸ್ಥಾನಗಳಿಸಲಿದೆ ಎಂದು ಟುಡೇಸ್ ಚಾಣಕ್ಯ ಹೇಳಿತ್ತು. ಆದರೆ ಫಲಿತಾಂಶ ಬಂದಾಗ ಎನ್‍ಡಿಎ ಮೈತ್ರಿಕೂಟ 61 ಸ್ಥಾನಗಳಿಸಿತ್ತು.

Comments are closed.