ಕರ್ನಾಟಕ

ಆಪರೇಷನ್‌ ಕಮಲ ಕುರಿತು ಈಶ್ವರಪ್ಪ ಬಳಿ ಡಿಕೆಶಿ ಹೇಳಿದ್ದೇನು?

Pinterest LinkedIn Tumblr


ಬೆಂಗಳೂರು: ಆಪರೇಷನ್‌ ಕಮಲದ ವಿಚಾರದ ಕುರಿತು ರಾಜ್ಯ ರಾಜಕೀಯದಲ್ಲಿ ಚರ್ಚೆ ಜೋರಾಗಿರುವ ವೇಳೆಯಲ್ಲಿ ಗುರುವಾರ ನಡೆದ ನೀರಾವರಿ ಇಲಾಖೆ ಸಭೆಯಲ್ಲೂ ಉಭಯ ಪಕ್ಷಗಳ ನಾಯಕರ ನಡುವೆ ಇದೇ ವಿಚಾರ ಹಾಸ್ಯಕ್ಕೆ ವಸ್ತುವಾಗಿದೆ.

ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಅವರು ಸಭೆಯಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಅವರ ಬಳಿ ಮಾತನಾಡುತ್ತಿದ್ದರು.ಈ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ‘ಏನು ಅವರನ್ನು ಕರೆದುಕೊಂಡು ಹೊಗಲಿಕ್ಕೆ ತೀರ್ಮಾನಿಸಿದ್ದೀರಾ ? ಪಾಟೀಲ್ರೆ, ನಿಮ್ಮ ಮೇಲೆ ಅವರ ಕಣ್ಣು ಇದೆ’ ಎಂದು ಈಶ್ವರಪ್ಪ ಅವರ ಕಾಲೆಳೆದಿದ್ದಾರೆ.

ಈಶ್ವರಪ್ಪ ಅವರು ನಗುನಗುತ್ತಾ ಪ್ರತಿಕ್ರಿಯೆ ನೀಡಿ ‘1 ಪರ್ಸಂಟ್‌ ಆದ್ರೂ ಯಶಸ್ವಿ ಆಗುತ್ತೆ ಅಂತ ನಂಬಿಕೆ ನಿಮಗೆ ಇದೆಯಾ? ಎಚ್‌.ಕೆ.ಪಾಟೀಲ್‌ ಅವರನ್ನಾದರೂ ಕರೆದುಕೊಂಡು ಹೋಗಬಹುದು ಎಂ.ಬಿ.ಪಾಟೀಲ್‌ ಅವರನ್ನು ಕರೆದುಕೊಂಡು ಹೋಗಲಿಕ್ಕೆ ಅಗುತ್ತದಾ’ ಎಂದು ಮರು ಪ್ರಶ್ನೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮಾಜಿ ಸಿಎಂಗಳು, ಮಾಜಿ ನೀರಾವರಿ ಸಚಿವರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Comments are closed.