ಕರ್ನಾಟಕ

ಈ ಜನ್ಮದಲ್ಲಿ ಕುಮಾರಸ್ವಾಮಿಯೊಂದಿಗೆ ಜಗಳ ಮಾಡುವ ಪ್ರಶ್ನೆಯೆ ಇಲ್ಲ; ರೇವಣ್ಣ

Pinterest LinkedIn Tumblr


ಹಾಸನ: ‘ಬದುಕಿರುವ ವರೆಗೆ ನನ್ನ ಕುಮಾರಸ್ವಾಮಿ ನಡುವೆ ಜಗಳ ಆಗುವುದಿಲ್ಲ. ಅವರೊಂದಿಗೆ ಹೊಡೆದಾಡಿಸ್ತೀನಿ ಅಂದುಕೊಂಡಿದ್ರೆ ಅದು ಭ್ರಮೆ’ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

ಗುರುವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು’ ನಾನು ಮುಖ್ಯಮಂತ್ರಿ ಆಕಾಂಕ್ಷಿನೂ ಅಲ್ಲ. ದೇವೇಗೌಡರು ನಮ್ಮ ನಾಯಕರು,ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಬೇಕಾದ್ರೆ ಮುಖ್ಯಮಂತ್ರಿಗಳು ಕೆಲಸ ಮಾಡು ಅಂದ್ರೆ ಮಾಡುತ್ತೇನೆ. ಅವರಿಗೆ ಬಲಭುಜವಾಗಿ ನಿಲ್ಲತ್ತೇನೆ’ ಎಂದರು.

‘ಮೈತ್ರಿ ಸರ್ಕಾರಕ್ಕೇನೂ ಧಕ್ಕೆ ಬರುವುದಿಲ್ಲ. ಅವರು ಯಾರು ಏನು ಮಾಡಿದ್ರೂ ಅವು ಕುಮಾರಸ್ವಾಮಿ ಅವರಿಗೆ ತಗಲುವುದಿಲ್ಲ. ಕೆಲವರು ಮಾಡಲಿಕ್ಕೆ ಹೋಗಿ ಏನೇನು ಅನುಭವಿಸಿದರು. ಎಯ್‌ ನಾಲ್ಕುವರೆ ಸಾವಿರ ಕೋಟಿ ಅಕೌಂಟ್‌ ಮನಿ ಇದೆ ನಿಮ್ಮನ್ನ ಜೈಲಿಗೆ ಹಾಕುತ್ತೀವಿ ಅಂದರು. ಏನಾದ್ರು’ ಎಂದು ಪ್ರಶ್ನಿಸಿದರು.

‘ಶೃಂಗೇರಿ ಶಾರಾದಾಂಬೆಯ ಆಶೀರ್ವಾದ, ಗುರುಗಳ ಆಶೀರ್ವಾದ, ಶಿವನ ಅನುಗ್ರಹ ಇರುವ ವರೆಗೆ ದೇವೇಗೌಡರ ಕುಟುಂಬಕ್ಕೆ ಏನೂ ಮಾಡಲು ಆಗುವುದಿಲ್ಲ ಎಂದರು. ಯಾವ ಮಾಟ ಮಂತ್ರದಿಂದ
ಸರ್ಕಾರಕ್ಕೆ ಏನೂ ಆಗಲ್ಲ. ಅದು ಅವರಿಗೇ ತಿರುಗು ಬಾಣ ಆಗುತ್ತದೆ’ಎಂದರು.

Comments are closed.