ಕರ್ನಾಟಕ

ಅಂತರ್ಜಾತಿ ವಿವಾಹ: ಪ್ರೀತಿಸಿ ಮದುವೆಯಾದ ತಂಗಿಯ ಗಂಡನನ್ನೇ ಕೊಂದ ಅಣ್ಣ; ನೊಂದು ಆತ್ಮಹತ್ಯೆ !

Pinterest LinkedIn Tumblr

ದೇವನಹಳ್ಳಿ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ಆಕ್ರೋಶಕೊಂಡು ಸಹೋದರನೇ ತನ್ನ ಪತಿಯನ್ನು ಹತ್ಯೆ ಮಾಡಿದ್ದರಿಂದ ಬೇಸರಕೊಂಡ ಸಹೋದರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ.

28 ವರ್ಷದ ಮೀನಾ ಮೃತ ದುರ್ದೈವಿ. ಮೀನಾ ಪ್ರೀತಿಸಿ ಅಂತರ್ಜಾತಿ ಯುವನನ್ನು ವಿವಾಹವಾಗಿದ್ದಕ್ಕೆ ಆಕ್ರೋಶಗೊಂಡ ಆಕೆಯ ಸಹೋದರ ವಿನಯ್ ನವೆಂಬರ್ 21ರಂದು ಪತಿಯನ್ನು ಕೊಲೆ ಮಾಡಿದ್ದನು. ಹೀಗಾಗಿ ಪತಿಯ ಅಗಲಿಕೆ ಹಾಗೂ ತಮ್ಮನೇ ತನ್ನ ಮುತ್ತೈದೆ ತನವನ್ನು ಕಿತ್ತುಕೊಂಡಿದ್ದರಿಂದ ಮನನೊಂದಿದ್ದ ಮೀನಾ ಕಳೆದ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೀನಾಳ ಗಂಡ ಹರೀಶ್ ಹಾಗೂ ವಿನಯ್ ಇಬ್ಬರು ಸ್ನೇಹಿತರಾಗಿದ್ದರು. ಹೀಗಾಗಿ ವಿನಯ್ ಮನೆಗೆ ಆಗಾಗ ಹೋಗುತ್ತಿದ್ದ ಹರೀಶ್ ಮೀನಾಳನ್ನು ಪ್ರೀತಿ ಮಾಡುತ್ತಿದ್ದ ಕೊನೆಗೆ ವಿನಯ್ ಹಾಗೂ ಕುಟುಂಬಸ್ಥರನ್ನು ಎದುರು ಹಾಕಿಕೊಂಡು ಮೀನ ಕಳೆದ ಆರು ತಿಂಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದರು.

ನವೆಂಬರ್ 21ರಂದು ಸಿಕ್ಕ ಹರೀಶ್ ನನ್ನು ವಿನಯ್ ಜತೆಯಲ್ಲಿ ಕರೆದುಕೊಂಡು ಹೋಗಿ ತೋಟವೊಂದರಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು. ಕೊಲೆ ವಿಚಾರ ಬೆಳಕಿಗೆ ಬಂದ ನಂತರ ವಿನಯ್ ಪೊಲೀಸರಿಗೆ ಶರಣಾಗಿದ್ದನು.

Comments are closed.