ಕರ್ನಾಟಕ

ಯುವಕನ ಕೈ ಬೆರಳಲ್ಲಿ ನಾಗರ ಹೆಡೆ!

Pinterest LinkedIn Tumblr


ಬೆಳಗಾವಿ: ವೈವಿಧ್ಯಮಯ ಜಗತ್ತಿನಲ್ಲಿರುವ ಸೃಷ್ಟಿಯ ವೈಶಿಷ್ಟ್ಯ ಕಂಡು ಅನೇಕ ಬಾರಿ ನಾವು ನಮ್ಮ ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದೇವೆ. ಅಪರೂಪದಲ್ಲೇ ಅಪರೂಪವಾದ ಸಂಗತಿಗಳು ನಮ್ಮ ನಡುವೆ ಹಾಗಾಗ ಕಾಣಿಸಿ ಅಚ್ಚರಿ ಮೂಡಿಸುತ್ತವೆ. ಇದೀಗ ಆ ಸಾಲಿಗೆ ಮತ್ತೊಂದು ಉದಾಹರಣೆ ಸೇರ್ಪಡೆಯಾಗಿದೆ.

ಬೆಳಗಾವಿಯ ಸಂತೋಷ್​ ಪೂಜಾರಿ(16) ಎಂಬ ಹುಡುಗನ ಎಡಗೈ ಎರಡು ಬೆರಳುಗಳು ಕೂಡಿಕೊಂಡು ನಾಗರ ಹೆಡೆ ಆಕಾರ ಪಡೆದುಕೊಂಡಿವೆ. ಹುಟ್ಟಿನಿಂದಲೇ ಬೆರಳುಗಳು ಸೇರಿಕೊಂಡಿದ್ದು, ನೋಡುಗರಿಗೆ ಸಾಕಷ್ಟು ಅಚ್ಚರಿ ಉಂಟುಮಾಡಿದೆ.

ಮತ್ತೊಂದು ಅಚ್ಚರಿಯೆಂದರೆ ಪ್ರತಿದಿನ ಹುತ್ತದ ಬಳಿ ಹೋಗಿ ಕಾಲ ಕಳೆಯುತ್ತಾನೆ ಈ ಯುವಕ. ಈತನಿಗೆ ಸರ್ಪದೋಷ ಇರಬಹುದೆಂದು ಕುಟುಂಬಸ್ಥರು ನಂಬಿದ್ದಾರೆ. ಅಲ್ಲದೆ, ಹಾವನ್ನು ಕೊಂದ ಪಾಪದಿಂದ ಹೀಗಾಗಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

Comments are closed.