ಕರ್ನಾಟಕ

ಸೋನಿಯಾಗೆ ಅಂಬರೀಶ್ ಷರತ್ತು ವಿಧಿಸಿದ್ದರಿಂದ ಎಸ್ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದು!

Pinterest LinkedIn Tumblr


ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರು ತಾವು ಕಾಂಗ್ರೆಸ್ ಗೆ ಸೇರಬೇಕಾದರೆ ನಮ್ಮ ಜಿಲ್ಲೆಯವರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರಿಗೆ ಷರತ್ತು ವಿಧಿಸಿದ್ದರು.
ಹೌದು ಅಂಬರೀಶ್ ಅವರು ಹೀಗೊಂದು ಷರತ್ತನ್ನು ಸೋನಿಯಾ ಗಾಂಧಿಗೆ ಹಾಕಿದ್ದರು. ಅದಕ್ಕೆ ಸೋನಿಯಾ ಸಹ ಒಪ್ಪಿಕೊಂಡಿದ್ದರು ಎಂದು ಸಿವಿ ಶೈಲಜಾ ಸಂಪಾದಕತ್ವದಲ್ಲಿ ಹೊರ ಬಂದಿರುವ ಅಂಬರೀಶ್ ಅಭಿನಂದನಾ ಗ್ರಂಥದ ಕನ್ನಡ ಭಾಗದಲ್ಲಿ ಸ್ವತಃ ಅಂಬರೀಶ್ ಅವರೇ ನೀಡಿರುವ ಹೇಳಿಕೆಯನ್ನು ದಾಖಲಿಸಿದ್ದಾರೆ.
1999ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಂಎಸ್ ಕೃಷ್ಣ ಪಾಂಚಜನ್ಯ ಮೊಳಗಿಸಲು ರೆಡಿಯಾಗಿದ್ದರು. ಈ ಸಮಯದಲ್ಲಿ ಜನತಾದಳದಲ್ಲಿ ಎಸ್ ಡಿ ಜಯರಾಂ ಗರಡಿಯಲ್ಲಿ ಪ್ರಬಲ ರಾಜಕೀಯ ನಾಯಕರಾಗಿ ಬೆಳೆಯುತ್ತಿದ್ದ ಅಂಬರೀಶ್ ಅವರನ್ನು ಖುದ್ದು ಕೃಷ್ಣ ಅವರೇ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದರು.
ಕೃಷ್ಣ ಅವರ ಆಹ್ವಾನಕ್ಕೆ ಒಪ್ಪಿದ ಅಂಬರೀಶ್ ಅವರು ಸೋನಿಯಾಗಾಂಧಿ ಮುಂದೆ ಒಂದು ಷರತ್ತು ಇಟ್ಟಿದ್ದರು. ಅದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮಂಡ್ಯ ಜಿಲ್ಲೆಯವರನ್ನು ಮುಖ್ಯಮಂತ್ರಿ ಮಾಡಬೇಕು. ಇದಕ್ಕೆ ಒಪ್ಪಿದರೆ ನಾನು ಕಾಂಗ್ರೆಸ್ ಸೇರಲು ಸಿದ್ಧ ಎಂದು ಷರತ್ತು ಹಾಕಿದ್ದರು. ಅದಕ್ಕೆ ಸೋನಿಯಾ ಕೂಡ ಒಪ್ಪಿದ್ದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂತು. ಅಂಬರೀಶ್ ಗೆ ಕೊಟ್ಟ ಮಾತಿನಂತೆ ಸೋನಿಯಾಗಾಂಧಿ ಎಸ್ಎಂ ಕೃಷ್ಣ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರು ಎನ್ನಲಾಗಿದೆ.

Comments are closed.