ಕರ್ನಾಟಕ

ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಲೂಟಿ

Pinterest LinkedIn Tumblr


ಬೆಂಗಳೂರು: ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಲೂಟಿ ಆಗಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಆರೋಪಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಮೋದಿ ಸರಕಾರ ಬೆಳೆ ವಿಮೆಯಲ್ಲಿ ರೈತರ ಹಣವನ್ನು ಲೂಟಿ ಮಾಡಿದೆ. ಬೆಳೆವಿಮೆಯಲ್ಲಿ ಕೇಂದ್ರದ ಅವ್ಯವಹಾರ ನಡೆದಿದೆ. ರಫೇಲ್ ಹಗರಣದಂತೆ ಬೆಳೆ ವಿಮೆಯಲ್ಲೂ ಹಗರಣ ನಡೆದಿದೆ. ರಫೆಲ್ ಗಿಂತ ದೊಡ್ಡ ಹಗರಣ ಇದು. ಅಲ್ಲಿ 15 ಸಾವಿರ ಕೋಟಿ ರುಪಾಯಿ ಅಕ್ರಮವಾಗಿದೆ. ಇಲ್ಲಿ ಸದ್ಯ 3.5 ಲಕ್ಷ ಕೋಟಿ ರೂ ಮೊತ್ತದ ಅಕ್ರಮವಾಗಿದೆ.

ಅದಾನಿ ಮತ್ತು ಅಂಬಾನಿ ವಿಮೆ ಕಂಪನಿಗೆ ಲಾಭ ಮಾಡಿಕೊಡುವ ದೃಷ್ಟಿಿಯಿಂದ ಯೋಜನೆ ಜಾರಿಯಾಗಿದೆ. ರೈತರಿಂದ 2014- 15ರಲ್ಲಿ 20ಸಾವಿರ ಕೋಟಿ ರುಪಾಯಿ ಇನ್ಸೂರೆನ್‌ಸ್‌ ಪ್ರೀಮಿಯಂ ಹಣ ಜಮಾ ಆಗಿತ್ತು. ಇದ್ರಲ್ಲಿ 5ಸಾವಿರ ಕೋಟಿ ಮಾತ್ರ ರೈತರಿಗೆ ಪರಿಹಾರ ಸಿಕ್ಕಿಿದೆ. ಉಳಿದ 15ಸಾವಿರ ಕೋಟಿ ಹಣ ಎಲ್ಲಿ ಹೋಗಿದೆ? ಬೆಳೆ ವಿಮೆ ಯೋಜನೆ ದೊಡ್ಡ ಹಗರಣ ಎಂದು ಆರೋಪಿಸಿದರು.

ರೈತರ ಹೆಸರಲ್ಲಿ ಮೋದಿ ಸರ್ಕಾರ ಲೂಟಿ ಮಾಡಿದೆ. ಹಗರಣದ ಬಗ್ಗೆೆ ಮೋದಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ಎಲ್ಲೆಡೆ ರೈತರ ಆತ್ಮಹತ್ಯೆೆಗಳು ನಡೆಯುತ್ತಿವೆ. ರಾಜ್ಯದ ಅತಿವೃಷ್ಟಿಿ ಅನಾವೃಷ್ಟಿಿಯ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಹಲವು ಕಾರ್ಯಕ್ರಮ ಮಾಡ ಲಾಗುತ್ತದೆ. ದೇಶದಲ್ಲಿ ಹಿಂದೆ ಹಲವು ದೊಡ್ಡ ದೊಡ್ಡ ಹಗರಣಗಳನ್ನು ನೋಡಿದ್ದೇವೆ.ಇಂದು ನಾವು ಮಾಧ್ಯಮದ ಮುಂದೆ ಬರಲು ಕಾರಣ ಪ್ರಥಮಬಾರಿಗೆ ದೇಶದಲ್ಲಿ ರೈತರ ಹಣ ಲೂಟಿ ಮಾಡಲಾಗಿದೆ. ಈ ಅವ್ಯವಹಾರ ಸಿಡಿ ಮೂಲಕ ನಾವು ಬಿಡುಗಡೆ ಮಾಡುತ್ತೇವೆ ಎಂದರು.

ತನಿಖೆ ನಡೆಯಲಿ: ಸುಪ್ರಿಂಕೋರ್ಟ್ ಒಂದು ವಿಶೇಷ ಸಮಿತಿ ರಚಿಸಿ ತನಿಖೆ ನಡೆಸಿ ರೈತರಿಂದ ಲೂಟಿಯಾಗಿರುವ ಮೊತ್ತವನ್ನು ರೈತರಿಗೆ ಕೊಡಿಸಬೇಕು. ದೇಶದ ಯಾವುದೇ ರೈತರಿಗೆ ಇಷ್ಟು ದೊಡ್ಡ ಅನ್ಯಾಯ ಆಗಿಲ್ಲ. ಇದೇ ತಿಂಗಳ 30 ರಂದು ನಮ್ಮ ರಾಷ್ಟ್ರೀಯ ಅಧ್ಯಕ್ಷ ನಾನಾ ಪಟೇಲ್ ಈ ಸಿಡಿ ಬಿಡುಗಡೆ ಮಾಡಲಿದ್ದಾರೆ. ದೇಶದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಸಿಕ್ಕ ತಕ್ಷಣ ಹೋರಾಟ ಆರಂಭಿಸುತ್ತೇವೆ. ತಮ್ಮ ಹಣ ಹೋಗುತ್ತಿರುವುದು ರೂತರಿಗೂ ಗೊತ್ತಿಲ್ಲ. ಅವರ ಖಾತೆಯಿಂದ 1300 ರಿಂದ 1500 ರೂ ಕಡಿತವಾಗುತ್ತಿದೆ. ಅದು ರೈತರ ಗಮನಕ್ಕೆೆ ಬರುತ್ತಿಲ್ಲ. ಕಳೆದ ಮೂರು ವರ್ಷದಲ್ಲಿ ನಾವು ಸಂಗ್ರಹಿಸಿದ ಮಾಹಿತಿ ಇದಾಗಿದೆ. ಈ ದಾಖಲೆ ಸಂಗ್ರಹಿಸಲು ಆರೇಳು ತಿಂಗಳು ಸಮಯ ಪಡೆದಿದೆ. ಸಿಬಿಐಗೆ ದಾಖಲೆ ನೀಡಿದ್ದೇವೆ. ಅವರು ಗಂಭೀರವಾಗಿ ಪರಿಗಣಿಸಿಲ್ಲ. ತನಿಖೆ ಆರಂಭಿಕ ಹಂತದಲ್ಲಿದೆ ಎಂದು ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಒಂದು ಜಿಲ್ಲೆ ಉದಾಹರಣೆ: ಬೀದರ್‌ ಜಿಲ್ಲೆಯಲ್ಲಿ 3,22,000 ಜನ ನೋಂದಾಯಿಸಿದ್ದಾರೆ. ಪರಿಹಾರ ಬಂದಿರುವುದು 1,672 ರೈತರಿಗೆ ಮಾತ್ರ. ಕಂಪನಿಯವರು ರೈತರಿಂದ 186 ಕೋಟಿ 90 ಲಕ್ಷ ರೂ ಬೆಳೆವಿಮೆ ಹಣಪಡೆದಿದ್ದಾರೆ. ಅದರಲ್ಲಿ ರೈತರಿಗೆ 48,80,000 ರೂ. ಕೊಟ್ಟಿದ್ದಾರೆ. ಉಳಿದ 186 ಕೋಟಿ ಹಣ ಗೌತಮ್ ಆಧಾನಿ ಅವರ ಪಾಲಾಗಿದೆ. ಒಂದು ಜಿಲ್ಲೆಯಲ್ಲಿ ಆರು ತಿಂಗಳಿಗೆ ಇಷ್ಟು ಹಣ ಲಾಭ ಮಾಡಲಾಗಿದೆ. ಒಟ್ಟಾರೆ 1380 ಕೋಟಿ ರೂ. ಲಾಭ ಮಾಡಲಾಗಿದೆ. ಮೂರುವರೆ ವರ್ಷದಲ್ಲಿ ನಮ್ಮ ರಾಜ್ಯದಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.

Comments are closed.