ಕರ್ನಾಟಕ

ಅಂಬಿ ಬರೆದ ಮೊದಲ ಪ್ರೇಮ ಪತ್ರ

Pinterest LinkedIn Tumblr


ಬೆಂಗಳೂರು: ಕನ್ನಡದ ಕರ್ಣ ಅಂಬರೀಶ್ ಮೊದಲ ಬಾರಿಗೆ ಪತ್ನಿ ಸುಮಲತಾರಿಗೆ ಬರೆದ ಪ್ರೇಮ ಪತ್ರದಲ್ಲಿ ‘ನನ್ನನ್ನು ಕ್ಷಮಿಸು’ ಅಂತಾ ಬರೆದಿದ್ದರು ಎಂದು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಒಮ್ಮೆ ಸುಮಲತಾ ಬರ್ತ್ ಡೇ ಇತ್ತು. ನನಗೆ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಹೇಳಲಾಗಿತ್ತು. ಚಿತ್ರೀಕರಣದಲ್ಲಿ ನಾನು ಬ್ಯೂಸಿ ಆಗಿದ್ದರಿಂದ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಲಿಲ್ಲ. ಮರುದಿನ ಶುಭಾಶಯ ತಿಳಿಸಲು ಹೋದಾಗ ಆಕೆ ನನ್ನ ಜೊತೆ ಮಾತನಾಡಲಿಲ್ಲ. ರಾತ್ರಿ ಪಾರ್ಟಿಗೆ ಬಾ ಅಂತಾ ಕರೆದ್ರೆ, ಬೆಳಗ್ಗೆ ಏಕೆ ಬಂದೆ ಎಂದು ಕೋಪಗೊಂಡು ಸುಮಲತಾ ನನ್ನ ಜೊತೆ ಮಾತನಾಡಲೇ ಇಲ್ಲ. ಆವಾಗ ಒಂದು ಪತ್ರದಲ್ಲಿ ಕ್ಷಮಿಸು, ಸಾರಿ, ಕ್ಷಮಿಸಂಡಿ ಎಂದು ಎಲ್ಲ ಭಾಷೆಯಲ್ಲಿ ಬರೆದು ಕೊಟ್ಟೆ. ಅದೇ ನನ್ನ ಮೊದಲ ಲವ್ ಲೆಟರ್ ಎಂದು ಹೇಳಿ ನಕ್ಕರು.

ಅಂದು ಸುಮಲತಾ ಮುಂಬೈನಲ್ಲಿದ್ದರು. ನನಗೆ ಬರ್ತ್ ಡೇ ಗಿಫ್ಟ್ ಏನು ಕೊಡಲೇ ಇಲ್ಲ ಅಂತಾ ಹೇಳಿದಾಗ, ನನಗೆ ಗೊತ್ತಿರುವ ಚಿನ್ನದ ಮಳಿಗೆ ಹೋಗಿ ಖರೀದಿ ಮಾಡು ಬಿಲ್ ಕೊಡುತ್ತೇನೆ ಅಂತಾ ಹೇಳಿದೆ. ಒಂದು ಚಿನ್ನದ ಸರ ಅಥವಾ ಬಳೆನೋ ಖರೀದಿ ಮಾಡಬಹುದು ಅಂತಾ ಗೆಸ್ ಮಾಡಿದ್ದೆ. ಆದ್ರೆ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗ ಐದೂವರೆ ಲಕ್ಷದ ವಜ್ರಾಭರಣ ತೋರಿಸಿದ್ದಾನೆ. ಅಷ್ಟು ಬೆಲೆಯ ನೆಕ್ಲೇಸ್ ಹೇಗೆ ಖರೀದಿ ಮಾಡೋದು ಅಂತಾ ಎರಡೂವರೆ ಲಕ್ಷದ ಬೆಲೆಯದ್ದು ಖರೀದಿ ಮಾಡಿದ್ರು.

ಅಂದಿನ ಕಾಲದಲ್ಲಿ ಎರಡೂವರೆ ಲಕ್ಷ ಅಂದ್ರೆ ದೊಡ್ಡ ಮೊತ್ತ. ಅಂಗಡಿ ಮಾಲೀಕ ನನಗೆ ಫೋನ್ ಮಾಡಿ ಯಾರು ಈ ಹುಡುಗಿ? ಇಷ್ಟು ಬೆಲೆಯ ನೆಕ್ಲೇಸ್ ಯಾಕೆ ಕೊಡಸ್ತೀಯಾ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ. ಕೂಡಲೇ ಫೋನ್ ಇಡು ಎಂದು ಹೇಳಿ ಕೊನೆಗೆ ಅದೇ ನೆಕ್ಲೇಸ್ ಖರೀದಿ ಆಯ್ತು. ಎರಡೂವರೆ ಲಕ್ಷದ ಮೌಲ್ಯದ ನೆಕ್ಲೇಸ್ ಸುಮಲತಾ ಮನೆಗೆ ಹೋಗುತ್ತೆ ಅಂತಾ ಆಕೆಯನ್ನು ಮದುವೆ ಆಗಿಬಿಟ್ಟೆ ಎಂದು ಹೇಳಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.

Comments are closed.