ಕರ್ನಾಟಕ

ಮಂಡ್ಯ ಬಸ್ ದುರಂತದಲ್ಲಿ ಬದುಕಿ ಬಂದ ಬಾಲಕ ಅಪಘಾತದ ಕುರಿತು ಹೇಳಿದ್ದು!

Pinterest LinkedIn Tumblr


ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ರಾಜಕುಮಾರ್ ಹೆಸರಿನ ಖಾಸಗಿ ಬಸ್ ನಾಲೆಗೆ ಉರುಳಿದ್ದರಿಂದ ಶಾಲಾ ಮಕ್ಕಳು ಸೇರಿದಂತೆ 23ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಇನ್ನು ಬಸ್ ದುರಂತದಲ್ಲಿ ಒಬ್ಬ ಯುವಕ ಹಾಗೂ ಒಬ್ಬ ಬಾಲಕ ಅದೃಷ್ಟವಶಾತ್ ಬಚಾವ್ ಆಗಿ ಬಂದಿದ್ದಾರೆ. ಬದುಕಿ ಬಂದಿರುವ ಗಿರೀಶ್ ಎಂಬಾತ ಕಿಟಕಿ ಗಾಜು ಹೊಡೆದು ಹೊರಬಂದಿದ್ದಾರೆ. ನಂತರ ಆರನೇ ತರಗತಿ ವಿದ್ಯಾರ್ಥಿ 13 ವರ್ಷದ ರೋಹಿತ್ ಎಂಬಾತನ ಜೀವ ಉಳಿಸಿದ್ದಾರೆ.
ನಂತರ ಮಾತನಾಡಿದ ಗಿರೀಶ್ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿತು. ಈ ವೇಳೆ ಬಸ್ ಕಂಡೆಕ್ಟರ್ ಹಾಗೂ ಚಾಲಕ ಇಬ್ಬರು ಬಸ್ ನಿಂದ ಜಿಗಿದು ಪರಾರಿಯಾಗಿದ್ದಾರೆ ಎಂದು ಗಿರೀಶ್ ಹೇಳಿದ್ದಾರೆ.
ಬಸ್ ಅಪಘಾತ ಕುರಿತು ಮಾತನಾಡಿರುವ ವದೇಸಂದ್ರದ ಬಾಲಕ ರೋಹಿತ್, ಬಸ್ ನಾಲೆಗೆ ಬೀಳುವ ಮುನ್ನ ಯಾರೋ ಒಬ್ಬರು ಬಸ್ ನಿಂದ ಹೊರಕ್ಕೆ ಹಾರಿದ್ದನ್ನು ಕಂಡಿದ್ದೆ ಎಂದು ಬಾಲಕ ಸ್ಥಳೀಯರ ಹತ್ತಿರ ಹೇಳಿಕೊಂಡಿರುವುದಾಗಿ ಸ್ಥಳೀಯರೊಬ್ಬರು ವಿವರಿಸಿದ್ದಾರೆ.
ಇಂದು ಶನಿವಾರವಾಗಿದ್ದರಿಂದ ಶಾಲೆ ಮಧ್ಯಾಹ್ನವಿದ್ದಿದ್ದರಿಂದ ಹೆಚ್ಚಾಗಿ ಶಾಲೆ ಮಕ್ಕಳು ಸಹ ಬಸ್ ನಲ್ಲಿದ್ದರು. ಇನ್ನು ಬಸ್ ನ ಕಿಟಕಿ ಗಾಜುಗಳು ಎಲ್ಲಾ ಮುಚ್ಚಿದ್ದರಿಂದ ಯಾರು ಹೊರಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.

Comments are closed.