ಕರ್ನಾಟಕ

1ರಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ ಬ್ಯಾಗ್​ನ ತೂಕದ ಪ್ರಮಾಣ ನಿಗದಿಗೊಳಿಸಿದ ಸರ್ಕಾರ!

Pinterest LinkedIn Tumblr


ಬೆಂಗಳೂರು,: ಪದವಿ ಪೂರ್ವ ಕಾಲೇಜು ಶಿಕ್ಷಣ ಮಂಡಳಿ ಶುಕ್ರವಾರ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಮೊಬೈಲ್​ ತರುವಂತಿಲ್ಲ ಎಂಬ ಆದೇಶ ಹೊರಡಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಶಾಕ್​ ನೀಡಿತ್ತು. ಇಂದು ಕೇಂದ್ರ ಸರ್ಕಾರವು ಶಾಲಾ ಮಕ್ಕಳಿಗೆ ಸಿಹಿ ಸುದ್ದಿ ನೀಡಿದೆ.

ಮಣಭಾರ ತೂಕವಿರುವ ಬ್ಯಾಗ್​ನ್ನು ಬೆನ್ನ ಮೇಲೆ ಹೊತ್ತು ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಇದು ಶುಭ ಸುದ್ದಿ. ಸ್ಕೂಲ್​ ಬ್ಯಾಗ್​ನ ತೂಕಕ್ಕೆ ಕಡಿವಾಣ ಹಾಕಿದೆ. ವಿದ್ಯಾರ್ಥಿಗಳ ಬ್ಯಾಗ್​ ಭಾರ ಮಿತಿ ಪಾಲಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸುತ್ತೋಲೆ ಹೊರಡಿಸಿದೆ.

ಹೌದು, ಮಕ್ಕಳ ಸ್ಕೂಲ್​ ಬ್ಯಾಗ್​ ತೂಕ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂತಹ ಮಹತ್ವದ ನಿರ್ಧಾರ ಕೈಗೊಂಡಿದೆ. ತರಗತಿಗೆ ಅನುಗುಣವಾಗಿ ಬ್ಯಾಗ್​ ಭಾರ ಪ್ರಮಾಣ ನಿಗದಿ ಮಾಡಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾನವ ಸಂಪನ್ಮೂಲ ಇಲಾಖೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.

ಸೂಚನೆಗಳು:

1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡುವಂತಿಲ್ಲ.

1 ಮತ್ತು 2 ನೇ ತರಗತಿ ಮಕ್ಕಳಿಗೆ ಭಾಷೆ ಮತ್ತು ಗಣಿತ ಹೊರತುಪಡಿಸಿ ಬೇರೆ ಯಾವ ವಿಷಯಗಳನ್ನು ಬೋಧಿಸುವಂತಿಲ್ಲ.

ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬುಕ್ ಗಳನ್ನು ತರುವಂತೆ ಸೂಚಿಸುವಂತಿಲ್ಲ.

ಬ್ಯಾಗ್ ತೂಕದ ಪ್ರಮಾಣ

1-2 ತರಗತಿಗೆ 1.5ಕಿಲೋ

3-5 ತರಗತಿಗೆ 2.3 ಕಿಲೋ

6-7 ತರಗತಿಗೆ 4ಕಿಲೋ

8-9 ತರಗತಿಗೆ 4.5ಕಿಲೋ

10ನೇ ತರಗತಿಗೆ 5ಕಿಲೋ

ಮಾನವ ಸಂಪನ್ಮೂಲ ಇಲಾಖೆಯಿಂದ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದ್ದು, ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆದೇಶ ಹೊರಡಿಸಿದೆ.

Comments are closed.