ಕರ್ನಾಟಕ

ಮಂಡ್ಯ ಕನಗನಮರಡಿಯಲ್ಲಿ ನಾಲೆಗೆ ಉರುಳಿಬಿದ್ದ ಬಸ್; 25 ಮಂದಿ ದುರ್ಮರಣ

Pinterest LinkedIn Tumblr

ಮಂಡ್ಯ: ನಾಲೆಗೆ ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ 25 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ನಡೆದಿದೆ.

ಮಂಡ್ಯದಿಂದ ಪಾಂಡವಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ರಸ್ತೆ ಪಕ್ಕದ ವಿಸಿ ನಾಲೆಗೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ, ಶಾಲಾ ಮಕ್ಕಳು ಸೇರಿದಂತೆ 15 ಮಂದಿ ಸಾವನ್ನಪ್ಪಿದ್ದಾರೆ.

ತಡೆಗೋಡೆ ಇಲ್ಲದ ಕಾರಣ ಬಸ್ ನಾಲೆಗೆ ಉರುಳಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ರಕ್ಷಣಾ ಕಾರ್ಯ ನಡೆಸಿ 20 ಶವಗಳನ್ನು ಮೇಲೆತ್ತಲಾಗಿದೆ. ದುರಂತದಲ್ಲಿ ಓರ್ವ ಶಾಲಾ ಬಾಲಕ ಮಾತ್ರ ಬದುಕುಳಿದಿದ್ದಾನೆ.

Comments are closed.