ಕರ್ನಾಟಕ

ಖದೀಮರು ನಿಮ್ಮ ಆಸ್ತಿಯ ನಕಲಿ ಸೃಷ್ಟಿಸಿ ಬ್ಯಾಂಕ್ ಲೋನ್ ಅಥವಾ ಮಾರಾಟ ಮಾಡಬಹುದು

Pinterest LinkedIn Tumblr


ಬೆಂಗಳೂರು: ಸೈಟ್, ಅಪಾರ್ಟ್ಮೆಂಟ್ ಗಳನ್ನ ನೋಡಿ ಚೆನ್ನಾಗಿದೆ ಎಂದು ಸಾಲ- ಸೋಲ ಮಾಡಿ ಆಸ್ತಿ ಖರೀದಿ ಮಾಡೋಕೆ ಮುಂಚೆ ಹುಷಾರಾಗಿರಿ. ಏಕಂದ್ರೆ, ನಕಲಿ ದಾಖಲೆಗಳನ್ನ ಸೃಷ್ಟಿಸಿ ಏಜೆಂಟ್​ಗಳು, ರಿಯಲ್ ಎಸ್ಟೇಟ್ ಬ್ರೋಕರ್​ಗಳು ಅಥವಾ ಭೂಮಾಫಿಯಾಗಳು ನಿಮ್ಮನ್ನು ತೊಂದ್ರೆಯಲ್ಲಿ ದೂಡ್ತಾರೆ ಹುಷಾರ್ ! ನಗರದಲ್ಲಿ ಆಸ್ತಿ ದಾಖಲೆಗಳ ನಕಲಿ ಹಾವಳಿ ಹೆಚ್ಚಾಗ್ತಿದೆಯಂತೆ ! ಒಂದೇ ಆಸ್ತಿಯನ್ನು ಹಲವು ಜನರಿಗೆ ಮಾರಿರುವ ಉದಾಹರಣೆಗಳು ಸಿಲಿಕಾನ್ ಸಿಟಿಯಲ್ಲಿ ಬಹಳಷ್ಟಿವೆ.

ನೀವೊಮ್ಮೆ ಈ ಎರಡೂ ದಾಖಲೆಗಳನ್ನು ಸೂಕ್ಷ್ಮವಾಗಿ ನೋಡಿ. ಈ ಹಕ್ಕು ಪತ್ರದಲ್ಲಿ ಅಸಲಿ ಯಾವುದು ನಕಲಿ ಯಾವುದು ಅಂತ ಬರಿಗಣ್ಣಿನಿಂದ ಇರಲಿ, ಕೈಯಲ್ಲಿ ಹಿಡಿದು ಸೂಕ್ಷ್ಮವಾಗಿ ನೋಡಿದ್ರೂ ಗೊತ್ತಾಗಲ್ಲ. ಅಷ್ಟರಮಟ್ಟಿಗೆ ಮೋಸಗಾರರು ಆಸ್ತಿ ದಾಖಲೆಗಳನ್ನು ನಕಲಿ ಮಾಡಿ, ಯಾವುದೋ ಸೈಟ್, ಯಾವುದೋ ಮನೆ ತೋರಿಸಿ ಇಲ್ಲದ ದಾಖಲೆಗಳನ್ನ ಸೃಷ್ಟಿಸಿ ನಿಮಗೆ ಮೋಸ ಮಾಡ್ತಾರೆ. ನಕಲಿ ಆಸ್ತಿ ದಾಖಲೆಗಳನ್ನು ಸೃಷ್ಟಿ ಮಾಡ್ತಿರೋರ ಸಂಖ್ಯೆ ಹೆಚ್ಚಾಗ್ತಿದೆ ಅಂತ, ದಾಖಲೆಗಳ ಸಾಚಾತನವನ್ನು ಪರೀಕ್ಷೆ ಮಾಡುವ ಫೋರೆನ್ಸಿಕ್ ಡಾಕ್ಯುಮೆಂಟ್ ಎಕ್ಸಾಮಿನರ್ ಅವರು ಈ ಅಂಶವನ್ನ ಬಹಿರಂಗಪಡಿಸಿದ್ದಾರೆ.

ಹೌಸಿಂಗ್ ಲೋನ್ ಕೊಡೋ ಬ್ಯಾಂಕ್​ಗಳಿಂದ ಆಸ್ತಿದಾಖಲೆ ಪರೀಕ್ಷೆಗಾಗಿ ಬರುತ್ತಿರುವ 10 ರಿಂದ 15 ಪ್ರಾಪರ್ಟಿ ಡಾಕ್ಯುಮೆಂಟ್​ಗಳ ಪೈಕಿ ಶೇ. 25 ರಿಂದ 30 ರಷ್ಟು ದಾಖಲೆಗಳು ಡೂಪ್ಲಿಕೇಟ್ ಆಗಿವೆ ಎಂದು ಕ್ಲೂ4 ಎವಿಡೆನ್ಸ್ ಸಂಸ್ಥೆಯ ಫೋರೆನ್ಸಿಕ್ ಎಕ್ಸ್​ಪರ್ಟ್ ಬಿ.ಎನ್. ಫಣೀಂದರ್ ಹೇಳುತ್ತಾರೆ.

ಆಸ್ತಿ ದಾಖಲೆ ನಕಲಿ ಮಾಡೋದು ಹೇಗೆ?

ನಗರದಲ್ಲಿ ಒಟ್ಟು 48 ಸಬ್ ರಿಜಿಸ್ಟರ್ ಆಫೀಸ್​ಗಳಿವೆ. ಅದರಲ್ಲಿ ಪ್ರತಿದಿನ ಒಂದೊಂದು ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಸರಾಸರಿ 50 ಪ್ರಾಪರ್ಟಿಗಳನ್ನು ರಿಜಿಸ್ಟರ್ ಮಾಡಲಾಗ್ತಿದೆ. ತಿಂಗಳಿಗೆ 75 ಸಾವಿರದಿಂದ ಒಂದು ಲಕ್ಷ ಆಸ್ತಿಗಳು ರಿಜಿಸ್ಟರ್ ಆಗುತ್ತವೆ. ಹೀಗೆ ರಿಜಿಸ್ಟರ್ ಆಗೋ ಪ್ರಾಪರ್ಟಿಗಳ ದಾಖಲೆಗಳು ನಕಲಿ ದಾಖಲೆ ಸೃಷ್ಟಿಸಿ ಮಾರಲಾಗಿರೋದು ಎಷ್ಟು ಎಂಬ ನಿಖರ ಮಾಹಿತಿ ಲಭ್ಯವಾಗ್ತಿಲ್ಲ. ಪರಿಸ್ಥಿತಿ ಹೀಗಿರಬೇಕಾದ್ರೆ ಉಪನೋಂದಣಿ ಕಚೇರಿಗಳಲ್ಲಿ ಅರ್ಜಿ ಹಾಕಿದ್ರೆ ಯಾರ ಆಸ್ತಿ ದಾಖಲೆಗಳನ್ನ ಬೇಕಾದ್ರೂ ಕೊಡ್ತಾರೆ. ಅದನ್ನು ಪಡೆಯುವ ಮೋಸಗಾರರು, ಆ ದಾಖಲೆಗೆ ಸರಿಹೊಂದುವ ಲೀಗಲ್ ಸ್ಟಾಂಪ್ ಪೇಪರ್ ಅನ್ನ ಪರ್ಚೇಸ್ ಮಾಡಿ, ಒರಿಜಿನಲ್ ಡಾಕ್ಯುಮೆಂಟ್​ನಲ್ಲಿರೋ ರಬ್ಬರ್ ಸ್ಟ್ಯಾಂಪ್ ರೀತಿಯಲ್ಲೇ ಅಚ್ಚು ರೆಡಿ ಮಾಡ್ಕೊಂಡು ಸಬ್ ರಿಜಿಸ್ಟರ್ ಕಚೇರಿಯಲ್ಲಿನ ದಾಖಲೆ ಹೋಲುವ ರೀತಿ ಡಾಕ್ಯುಮೆಂಟ್ ಸಿದ್ದಪಡಿಸಿಕೊಂಡು ಪ್ರಾಪರ್ಟಿ ಲೋನ್​ಗೆ ಅಪ್ಲೈ ಮಾಡ್ತಿದ್ದಾರಂತೆ. ಅದೇ ರೀತಿ ಒರಿಜಿನಲ್ ಡಾಕ್ಯುಮೆಂಟ್ ಅನ್ನ ಕಲರ್ ಕ್ಸೆರಾಕ್ಸ್ ಮಾಡಿಯೂ, ಒರಿಜಿನಲ್ ಇಂಕ್ ಪೆನ್ ಮೂಲಕ ದಾಖಲೆ ತಿದ್ದಿ ಅದನ್ನ ಲ್ಯಾಮಿನೇಷನ್ ಮಾಡ್ಸಿ ಬ್ಯಾಂಕಿನಿಂದ ಲೋನ್ ಪಡೆದು ಮೋಸ ಮಾಡ್ತಿದ್ದಾರೆ. ಕೆಲವು ವೇಳೆ ಇದೇ ರೀತಿ ಡಾಕ್ಯುಮೆಂಟ್ ರೆಡಿ ಮಾಡಿ ಒಂದೇ ಆಸ್ತಿಯನ್ನ ಹಲವರಿಗೆ ಸೇಲ್ ಮಾಡ್ತಿರೋದು ಇದೇ ರೀತಿಯಂತೆ !

ಆಸ್ತಿ ಪತ್ರದ ಸಾಂದರ್ಭಿಕ ಚಿತ್ರ

ಬ್ಯಾಂಕ್​ನಿಂದ ಹೋಮ್ ಲೋನ್​ಗಾಗಿ ಬಂದ ದಾಖಲೆಗಳನ್ನು ವಕೀಲರ ಬಳಿ ಲೀಗಲ್ ಒಪಿನಿಯನ್​ಗೆ ಕಳಿಸಿದ್ರೆ, ಲಾಯರ್​ಗಳು ಆ ದಾಖಲೆಗಳಲ್ಲಿನ ಅಂಶಗಳನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯಗಳನ್ನು ಕೊಡ್ತಾರೆಯೇ ವಿನಃ ಲೋನ್​ಗಾಗಿ ಕೊಟ್ಟ ದಾಖಲೆ, ಆ ಡಾಕ್ಯುಮೆಂಟ್​ನಲ್ಲಿ ಬಳಸಿದ ಇಂಕ್, ರಬ್ಬರ್ ಸ್ಟಾಂಪ್, ಸೈನ್​ನ ಅಸಲಿತನವನ್ನು ಕಂಡು ಹಿಡಿಯುವ ತಜ್ಞತೆ ಹೊಂದಿರೋದಿಲ್ಲ. ಈ ವಿಚಾರದಲ್ಲಿ ಫೋರೆನ್ಸಿಕ್ ಡಾಕ್ಯುಮೆಂಟ್ ಎಕ್ಸಾಮಿನರ್ ಮಾತ್ರ ಮೈಕ್ರೋಸ್ಕೋಪಿಕ್ ಎಕ್ಸಾಮಿನೇಷನ್ ಮತ್ತಿತರ ಪರೀಕ್ಷೆಗಳನ್ನ ನಡೆಸಿ ದಾಖಲೆಗಳು ಒರಿಜಿನಲ್ ಇವೆಯಾ ಅಥವಾ ಫ್ಯಾಬ್ರಿಕೇಟ್ ಮಾಡಲಾಗಿದೆಯಾ ಅಂತ ಹೇಳಬಲ್ಲರೆಂದು ಫಣೀಂದರ್ ತಿಳಿಸುತ್ತಾರೆ..

ದಾಖಲೆಗಳನ್ನ ಲ್ಯಾಮಿನೇಟ್ ಮಾಡದಿರಿ:

ರಾಷ್ಟ್ರೀಯ ಬ್ಯಾಂಕ್​​ಗಳೀಗ ಲ್ಯಾಮಿನೇಷನ್ ಮಾಡಿದ ದಾಖಲೆಗಳಿದ್ರೆ ಅಂತಹ ಪ್ರಕರಣಗಳಲ್ಲಿ ಲೋನ್ ನೀಡ್ತಿಲ್ಲ. ಡೂಪ್ಲಿಕೇಟ್ ದಾಖಲೆಗಳ ಹಾವಳಿ ಜಾಸ್ತಿಯಾಗ್ತಿರೋದ್ರಿಂದ ಒರಿಜಿನಲ್ ಆಸ್ತಿ ದಾಖಲೆಗಳಿದ್ರೂ ಅವುಗಳಿಗೆ ಲ್ಯಾಮಿನೇಷನ್ ಮಾಡಿದ್ರೆ ಅವುಗಳನ್ನು ತೆಗೆದುಕೊಡುವಂತೆ ಹೇಳ್ತಿದ್ದಾರೆ. ಇಲ್ಲದಿದ್ದರೆ ಸಾಲ ಕೊಡದಿರಲು ನಿರ್ಧರಿಸಿದ್ದಾರೆ. ದಾಖಲೆಗಳ ಲ್ಯಾಮಿನೇಷನ್ ಮಾಡಬೇಕಾದ್ರೆ ಅವುಗಳಿಗೆ ಅಸಿಟೋನ್ ಎಂಬ ಜೆಲ್ ಬಳಸ್ತಾರೆ. ಆ ಜೆಲ್ ಅನ್ನು ದಾಖಲೆಗಳು ಹೀರಿಕೊಂಡು ಗಟ್ಟಿಯಾಗುತ್ತವೆ. ಒಂದೊಮ್ಮೆ ಆ ಪ್ಲಾಸ್ಟಿಕ್ ಶೀಟ್ ತೆಗೆದರೂ ಕಾಲಾನಂತರ ಆ ದಾಖಲೆಗಳು ಪುಡಿಯಾಗುತ್ತಿವೆ ಅಂತ ಹೇಳ್ತಾರೆ ಫೋರೆನ್ಸಿಕ್ ಎಕ್ಸ್ ಪರ್ಟ್ ಫಣೀಂದ್ರ. ಹೀಗಾಗಿ ನಿಮ್ಮಲ್ಲಿ ಒರಿಜಿನಲ್ ಡಾಕ್ಯುಮೆಂಟ್​ಗಳನ್ನ ಲ್ಯಾಮಿನೇಟ್ ಮಾಡೋಕೆ ಹೋಗಬೇಡಿ. ಡೂಪ್ಲಿಕೇಟ್ ಡಾಕ್ಯುಮೆಂಟ್ಸ್ ಬಗ್ಗೆಯೂ ಎಚ್ಚರಿಕೆಯಿಂದರಿ.

Comments are closed.