ಬೆಳಗಾವಿ: ಯುವತಿಯನ್ನು ಕಿಡ್ನಾಪ್ ಮಾಡಿ ಅಂದೇ ಬಿಡುಗಡೆ ಮಾಡಿರುವ ಸಿನಿಮೀಯ ರೀತಿ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಕ್ಟೋಬರ್ 23 ರಂದು ಬೆಳಗಾವಿಯ ತಿಲಕವಾಡಿಯ ದೇಶಮುಖ್ ರಸ್ತೆಯಲ್ಲಿ ಕಾಲೇಜು ಯುವತಿಯನ್ನು ಅಪಹರಿಸಲಾಗಿತ್ತು.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಮಾರುತಿ ವ್ಯಾನ್ ನಲ್ಲಿ ಬಂದ ನಾಲ್ಕು ಮಂದಿ ಬಲವಂತವಾಗಿ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ. ಇದನ್ನು ನೋಡಿದವರು ಆಘಾತಕ್ಕೊಳಗಾದರು. ಗುರುವಾರ ಸಂಜೆ ತಿಲಕವಾಡಿ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಅಕ್ಟೋಬರ್ 23 ರಂದು ಅನುರಾಧ( ಹೆಸರು ಬದಲಾಯಿಸಲಾಗಿದೆ) ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪಹರಿಸಲಾಗಿತ್ತು, ನಂತರ ಆಕೆಯನ್ನು ಅದೇ ದಿನ ಸಂಕೇಶ್ವರ ಬಳಿ ಬಿಡುಗಡೆ ಮಾಡಲಾಗಿತ್ತು. ನಂತರ ಆಕೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಮನೆ ತಲುಪಿದ್ದಳು.
ಅಪಹರಿಸಿ ಆಕೆಯನ್ನು ಕೂಡಲೇ ಬಿಡುಗಡೆ ಮಾಡಿರುವುದರ ಹಿಂದಿನ ರಹಸ್ಯ ಇದುವರೆಗೂ ತಿಳಿದಿಲ್ಲ, ಸಂಜೆ ಮನೆಗೆ ಬಂದ ನಂತರ ಆಕೆ ನಡೆದ ಘಟನೆಯನ್ನು ತನ್ನ ಪೋಷಕರ ಜೊತೆ ಚರ್ಚಿಸಿದ್ದಳು, ಅಂದು ಆಕೆ ಆಘಾತದಲ್ಲಿದ್ದ ಕಾರಣ ಮರುದಿನ ಆಕೆ ತನ್ನ ಪೋಷಕರ ಜತೆ ತಿಲಕವಾಡಿ ಠಾಣೆಗೆ ತೆರಳಿ ದೂರು ನೀಡಿದ್ದಳು. ಈ ಸಂಬಂಧ ವಿಶೇಷ ತಂಡ ರಚಿಸಲಾಗಿದೆ.
Comments are closed.