ಕರ್ನಾಟಕ

ಮನೆಯ ಸಮಸ್ಯೆ ಸುದ್ದಿ ಮಾಧ್ಯಮಗಳ ಜೊತೆ ಚರ್ಚೆ ಮಾಡಬೇಕೇ?; ಕುಮಾರಸ್ವಾಮಿ

Pinterest LinkedIn Tumblr


ರಾಮನಗರ: ಮನೆಯಲ್ಲಿ ಸಣ್ಣಪುಟ್ಟ ಗೊಂದಲಗಳಿವೆ. ಅವುಗಳನ್ನು ಮಾಧ್ಯಮಗಳ ಎದುರು ಚರ್ಚೆ ಮಾಡುವುದಕ್ಕೆ ಆಗುತ್ತದಾ?.ಇದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಕೇಳಿದ ಪ್ರಶ್ನೆ.

ಬುಧವಾರ ರಾಮನಗರದ ಕೇತಗಾನಹಳ್ಳಿಯಲ್ಲಿ ಜೆಡಿಎಸ್‌ ಸಭೆಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ಪೊಲೀಸ್‌ ಸರ್ಪಗಾವಲಿನ ಮೂಲಕ ನಿರ್ಬಂಧ ವಿಧಿಸಲಾಗಿತ್ತು. ಈ ವಿಚಾರವನ್ನು ಪ್ರಶ್ನಿಸಿದ್ದಕ್ಕೆ ಸಿಎಂ ಉತ್ತರಿಸಿದರು.

ಮಾಧ್ಯಮಗಳು ಗೊಂದಲವನ್ನು ದೊಡ್ಡದು ಮಾಡಿ ಪ್ರಸಾರ ಮಾಡಿ ಬಿಡುತ್ತವೆ. ನಾನೇ ಮಾಧ್ಯಮಗಳನ್ನು ದೂರವಿಡಲು ಸೂಚಿಸಿದ್ದು .ಮನೆಯ ವಿಚಾರವನ್ನು ಅಂಗಡಿ ಬಾಗಿಲು ತೆರದು ಮಾತನಾಡುವುದಕ್ಕೆ ಆಗುತ್ತಾದಾ ಎಂದರು.

ಸಂಜೆ ನಿಮ್ಮನ್ನೆಲ್ಲಾ ಕರೆದು ಎನೆಲ್ಲಾ ಚರ್ಚೆ ನಡೆದಿದೆ ಎನ್ನುವ ವಿವರವನ್ನು ನೀಡುತ್ತೇವೆ ಎಂದರು.

Comments are closed.