ಕರ್ನಾಟಕ

ಮಿತಿ ಮೀರಿದ ಶ್ರದ್ಧಾಂಜಲಿ ವಾಹನದ ದುಬಾರಿ ಬಾಡಿಗೆ

Pinterest LinkedIn Tumblr


ಯಲಹಂಕ: ಬಿಬಿಎಂಪಿಯ ಯಲಹಂಕ ವ್ಯಾಪ್ತಿಯಲ್ಲಿ ಶ್ರದ್ಧಾಂಜಲಿ ವಾಹನದ ಬಾಡಿಗೆ ಮಿತಿ ಮೀರಿದ್ದು, ಬಡವರಿಗೆ ಶವ ಸಂಸ್ಕಾರ ದುಬಾರಿ ಎನಿಸಿಬಿಟ್ಟಿದೆ.

ಇಲ್ಲಿರುವ ಕೆಲವು ಶ್ರದ್ಧಾಂಜಲಿ ವಾಹನಗಳು ಒಂದು ಶವ ಸಾಗಾಟಕ್ಕೆ 5 ಸಾವಿರ ರೂಪಾಯಿಗೂ ಹೆಚ್ಚು ಬೇಡಿಕೆ ಇಡುತ್ತಾರೆ. ಹೀಗಾಗಿ ಬಡವರು ಕಷ್ಟಪಡುವಂತಾಗಿದೆ.
ಯಲಹಂಕ ಪ್ರದೇಶದ 11 ವಾರ್ಡ್‌ಗಳ ಜನರು ಶವಸಂಸ್ಕಾರಕ್ಕಾಗಿ ಮೂರುವರೆ ಕಿ.ಮೀ ದೂರದಲ್ಲಿರುವ ಹೆಬ್ಬಾಳ ಶವಗಾರ ಅಥವಾ ನಾಲ್ಕು ಕಿ ಮೀ ದೂರದ ಮೇಡಿ ಅಗ್ರಹಾರದ ಸ್ಮಶಾನಕ್ಕೆ ಹೋಗಬೇಕು. ಶವ ಸಾಗಾಟಕ್ಕೆ ಸಾಮಾನ್ಯ ವಾಹನಗಳನ್ನು ಬಳಸುವುದಿಲ್ಲ. ಹೀಗಾಗಿ ವಿಶೇಷ ಶ್ರದ್ಧಾಂಜಲಿ ವಾಹನಗಳೇ ಬೇಕು. ಇಂಥದ್ದರದಲ್ಲಿ ಇರುವ ಕೆಲವು ವಾಹನಗಳು ದುಬಾರಿ ಬಾಡಿಗೆಯನ್ನು ಕೇಳುತ್ತಿರುವುದು ಜನರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಲು ಜನರು ಸಿದ್ಧರಾಗಿದ್ದಾರೆ.

‘‘ಶ್ರದ್ಧಾಂಜಲಿ ವಾಹನ ಜನರ ಅಗತ್ಯಗಳಲ್ಲಿ ಒಂದು. ಹೀಗಾಗಿ ಕ್ಷೇತ್ರ ವ್ಯಾಪ್ತಿಯ ಜನಪ್ರತಿನಿಧಿಗಳು ತಮ್ಮ ಅನುದಾನದಲ್ಲಿ ವಾಹನದ ವ್ಯವಸ್ಥೆ ಮಾಡಬೇಕು,’’ ಎಂದು ಸ್ಥಳೀಯರಾದ ಮಾರ್ಕಾಂಡೇಯ ಎಂಬುವರು ಅಭಿಪ್ರಾಯಪಟ್ಟಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ 8 ವಲಯಗಳ ಪೈಕಿ ಪೂರ್ವ ವಲಯದಲ್ಲಿ ಒಂದು, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಒಂದು ಶವ ಸಂಸ್ಕಾರ ವಾಹನವಿದೆ. ಯಲಹಂಕ ವಲಯದಲ್ಲಿ ವಾಹನವಿಲ್ಲ. ಈ ಬಗ್ಗೆ ಬಿಬಿಎಂಪಿ ಸಭೆಯಲ್ಲಿ ಮಾಹಿತಿ ನೀಡಿ ಕ್ರಮ ತೆಗೆದುಕೊಳ್ಳಲಾಗುವುದು.
– ನಾಗರಾಜು.
ಜಂಟಿ ನಿರ್ದೇಶಕರು, ಯಲಹಂಕ ವಲಯ

Comments are closed.