ಕರ್ನಾಟಕ

ದುಷ್ಕರ್ಮಿಗಳಿಂದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನಾಮಫಲಕ ಧ್ವಂಸ

Pinterest LinkedIn Tumblr


ಬೆಂಗಳೂರು: ಯಲಹಂಕದ ಮುಖ್ಯರಸ್ತೆಯಲ್ಲಿ ಅಳವಡಿಸಿದ್ದ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ನಾಮಫಲಕವಿದ್ದ ಗ್ರಾನೈಟ್ ಸ್ಲಾಬ್‌ನ್ನು ಭಾನುವಾರ ರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

ದಷ್ಕರ್ಮಿಗಳ ಕೃತ್ಯಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕಳವಳ ವ್ಯಕ್ತಪಡಿಸಿದ್ದು, ಧ್ವಂಸಗೊಳಿಸಿರುವ ಉನ್ನಿಕೃಷ್ಣನ್ ಅವರ ನಾಮಫಲಕ ಇದ್ದ ಗ್ರಾನೈಟ್ ಸ್ಲಾಬ್‌ನ್ನು ಮರು ಅಳವಡಿಸುವಂತೆ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

ದುಷ್ಕರ್ಮಿಗಳ ಹೇಯ ಕೃತ್ಯಕ್ಕೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಮೇಜರ್ ಸಂದೀಪ್ ಉನ್ನಿಕೃಷ್ಣನ್ ನಾಮಫಲಕ ಧ್ವಂಸಗೊಳಿಸಿದ ದುಷ್ಕರ್ಮಿಗಳು

2008ರಲ್ಲಿ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಎನ್‌ಎಸ್‌ಜಿ ಕಮಾಂಡರ್ ಮೇ.ಸಂದೀಪ್ ಉನ್ನಿಕೃಷ್ಣನ್ ಅವರ ಸ್ಮರಣಾರ್ಥವಾಗಿ ಬೆಂಗಳೂರಿನ ಯಲಹಂಕ ಮುಖ್ಯರಸ್ಥೆಯಲ್ಲಿ ವೀರಯೋಧ ಉನ್ನಿಕೃಷ್ಣನ್ ಅವರ ನಾಮಫಲಕವಿದ್ದ ಗ್ರಾನೈಟ್ ಸ್ಲಾಬ್‌ ಅಳವಡಿಸಲಾಗಿತ್ತು.

Comments are closed.