ಕರ್ನಾಟಕ

ಜೆಡಿಎಸ್​ ನಲ್ಲಿ ನಡೆದಿದ್ದ ಆಪರೇಷನ್​ ಕಮಲ ಬಯಲು

Pinterest LinkedIn Tumblr


ಹಾಸನ: ಸಿಎಂ ತವರು ಜಿಲ್ಲೆಯಲ್ಲಿಯೇ ಆಪರೇಷನ್​ ಕಮಲ ನಡೆದಿದ್ದು, ಕಿಂಗ್​ ಪಿನ್​ಗಳ ಅಸಲಿ ಆಟ ಇದೀಗ ಬಟಾಬಯಲಾಗಿದೆ.

ಸಿಎಂ ಕುಮಾರಸ್ವಾಮಿ ಈ ಹಿಂದೆ ಮಾಡಿದ್ದ ಆರೋಪ ನಿಜವಾಗಿದೆ. ಬಿಜೆಪಿಯವರು 3 ಜನ ಕಿಂಗ್​ಪಿನ್​ಗಳನ್ನು ಇಟ್ಟುಕೊಂಡು ಗೌಡರ ಕೋಟೆಯಲ್ಲಿ ಆಪರೇಷನ್​ ಕಮಲದ ತಾಲೀಮು ನಡೆಸಿದ್ದಾರೆ ಎಂದು ಎಚ್​ಡಿಕೆ ಆರೋಪ ಮಾಡಿದ್ದರು. ಹಾಸನ ಜಿಲ್ಲೆ ಸಕಲೇಶಪುರ ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್.ಕೆ.ಕುಮಾರಸ್ವಾಮಿಗೆ ಗಾಳ ಹಾಕಲು ಕಿಂಗ್​ಪಿನ್​​​ ಉದಯ್ ಗೌಡ ಯತ್ನಿಸಿದ್ದ ಎಂಬ ಸತ್ಯ ಬಯಲಾಗಿದೆ.

ಕಿಂಗ್​ಪಿನ್​​ ಉದಯ್ ಗೌಡ ಜಿಮ್ ಸೋಮನ ಬ್ಯುಸಿನೆಸ್ ಪಾರ್ಟ್ನರ್​. ಈತ ಜೆಡಿಎಸ್​ ಶಾಸಕ ಎಚ್​.ಕೆ.ಕುಮಾರಸ್ವಾಮಿಗೆ ಆಮಿಷ ಒಡ್ಡಿದ್ದ. ಜೆಡಿಎಸ್ ನಿಂದ ಬಿಜೆಪಿಗೆ ಬಂದರೆ 30 ಕೋಟಿ ಹಣ ಮತ್ತು ಸಚಿವ ಸ್ಥಾನ ನೀಡುವುದಾಗಿ ಉದಯ್ ಮತ್ತು ಸಹಚರರು ಹೇಳಿದ್ದರು.

ಇನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ, ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಬಿಡುವ ಮಾತೇ ಇಲ್ಲಾ ಎಂದು ಶಾಸಕರ ಪತ್ನಿ ಚಂಚಲಾ ಕುಮಾರಸ್ವಾಮಿ ಹೇಳಿದ್ದಾರೆ. ಹೆಚ್.ಕೆ.ಕುಮಾರಸ್ವಾಮಿ ಜೆಡಿಎಸ್ ನಿಂದ ಒಟ್ಟಾರೆ 6 ಬಾರಿ ಎಂಎಲ್ಎ ಮತ್ತು ಮಾಜಿ ಸಚಿವರು ಆಗಿದ್ದರು.

ಈ ಕಿಂಗ್​ಪಿನ್​ಗಳು ನಿನ್ನೆಯಷ್ಟೇ ಅರಸೀಕೆರೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಕಾರ್ಯಕ್ರಮದ ನಂತರ ಯಡಿಯೂರಪ್ಪ ಶಿವಮೊಗ್ಗಕ್ಕೆ ತೆರಳಿದ್ದರು. ಕಿಂಗ್​ಪಿನ್​ಗಳು ಒಟ್ಟಿಗೆ ಸೇರಿ ಸರ್ಕಾರ ಉರುಳಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಾರೆ ಜೆಡಿಎಸ್​ ಭದ್ರಕೋಟೆಯಲ್ಲೇ ಬಿಜೆಪಿ ಆಪರೇಷನ್​ ಕಮಲ ನಡೆಸಲು ಮುಂದಾಗಿದೆ. ಯಡಿಯೂರಪ್ಪನವರ ಕೃಪಾಶೀರ್ವಾದದಲ್ಲಿ ಆಪರೇಷನ್ ಕಮಲ ನಡೆದಿತ್ತಾ..? ಎಂಬ ಪ್ರಶ್ನೆಯೂ ಸಹ ಹುಟ್ಟಿದೆ.

Comments are closed.