ಕರ್ನಾಟಕ

ಸಿದ್ದರಾಮಯ್ಯ ಮುಂದೆ ಜಾರಕೊಹೊಳಿ ಇಟ್ಟ ಬೇಡಿಕೆ ಏನು?

Pinterest LinkedIn Tumblr


ಬೆಂಗಳೂರು: ವಿದೇಶದಿಂದ ಕರ್ನಾಟಕಕ್ಕೆ ವಾಪಸ್ಸಾದ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​​ನಲ್ಲಿ ಬಂಡಾಯ ಶಮನಕ್ಕೆ ಮುಂದಾಗಿದ್ದರು. ಆದರೆ, ​​ರಮೇಶ್ ಜಾರಕಿಹೊಳಿ‌ ಇಟ್ಟ ಬೇಡಿಕೆ ಕೇಳಿ ಮಾಜಿ ಸಿಎಂ ಕಕ್ಕಾಬಿಕ್ಕಿಯಾಗಿದ್ದಾರೆ ಎನ್ನಲಾಗಿದೆ. ಹೀಗಾದಲ್ಲಿ ಜಾರಕಿಹೊಳಿ ಬೇಡಿಕೆಯ ಹಿಂದಿನ ರಣತಂತ್ರವೇನು? ಮಾಜಿ ಸಿಎಂ ಕಕ್ಕಾಬಿಕ್ಕಿಯಾಗಿದ್ದೇಕೆ ಎಂದ ಚರ್ಚೆಗಳು ನಡೆಯುತ್ತಿವೆ.

ಕಾವೇರಿಯಲ್ಲಿ ರಮೇಶ್​​ ಜಾರಕಿಹೊಳಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ಧಾರೆ. ಈ ವೇಳೆ ಬಂಡಾಯ ಶಮನಕ್ಕೆ ಮುಂದಾದ ಮಾಜಿ ಸಿಎಂ ಮುಂದೆ ರಮೇಶ್ ಜಾರಕಿಹೊಳಿ‌ ಮೂರು ಬೇಡಿಕೆ ಇಟ್ಟಿದ್ದಾರೆ. ಖಡಕ್ ಆಗೇ ಮಾತು ಮುಂದುವರೆಸಿದ್ದ ರಮೇಶ್​​
ಆರಂಭದಲ್ಲಿ‌ಯೇ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ ಎನ್ನುತ್ತಿವೆ ಮೂಲಗಳು.

ಜಾರಕಿಹೊಳಿ ಬ್ರದರ್ಸ್​​ ಬೇಡಿಕೆಗಳು ಈ ರೀತಿಯಿವೆ.
ಕಾಂಗ್ರೆಸ್ಸಿನಲ್ಲೆ ನಮ್ಮ ಬಣ ಇರಬೇಕಂದರೆ ನನ್ನನ್ನು ಡಿಸಿಎಂ ಮಾಡಿ
ಬಳ್ಳಾರಿಯಲ್ಲಿ ನಮ್ಮವರೊಬ್ಬರಿಗೆ ಮಿನಿಸ್ಟರ್ ಮಾಡಿ.
ನಮ್ಮ‌ ತಂಡದ ಎಲ್ಲಾ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು

ಸಚಿವ ರಮೇಶ್ ಜಾರಕಿಹೊಳಿ‌ ಈ ಮೂರು ಬೇಡಿಕೆಗಳನ್ನು ಕೇಳಿ ಸಿದ್ದರಾಮಯ್ಯ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ನೀನು ಡಿಸಿಎಂ ಹುದ್ದೆ ಕೇಳಿದ್ರೆ ಅದು ನನ್ನ ಕೈಯಲ್ಲಿ ಎಲ್ಲಿದೆ. ರಾಹುಲ್ ಗಾಂಧಿ ಅವರ ಕೈಯಲ್ಲಿ ದೊಡ್ಡದೊಡ್ಡ ಹುದ್ದೆಗಳಿರುತ್ತವೆ. ಅವರನ್ನು ಇನ್ನೆರಡು ದಿನದಲ್ಲಿ ಭೇಟಿ ಆಗಿ ಈ ವಿಚಾರ ಗಮನಕ್ಕೆ ತರುತ್ತೇನೆ ಎಂದು ಕಾಲ್ಕಿತ್ತಿದ್ದಾರೆ.

ನಿನ್ನ ಬಳಿ ನಾನು ಮತ್ತೊಮ್ಮೆ‌ ಮಾತಾಡ್ತೀನಿ‌. ದಯವಿಟ್ಟು ನೀನು ಯಾವುದೇ ರೀತಿ ನಿರ್ಧಾರ ಕೈಗೊಳ್ಳಬೇಡ ಎಂದು ಸಮಾಧಾನ ಮಾಡಲು ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ. ಸದ್ಯ ರಾಜಕೀಯ ವಲಯದಲ್ಲಿ ರಮೇಶ್ ಜಾರಕಿಹೊಯ ಬೇಡಿಕೆ ಹಿಂದಿದೆಯಾ ಬಿಜೆಪಿಗೆ ಹೋಗೋ ತಂತ್ರ ಎಂಬ ಚರ್ಚೆ ಕೂಡ ಪ್ರಾರಂಭವಾಗಿದೆ.

ಈಗಾಗಲೇ ಜಿ.ಪರಮೇಶ್ವರ್ ಡಿಸಿಎಂ‌ ಆಗಿದ್ದಾರೆ. ಹಾಗಾಗಿ ರಮೇಶ್ ಜಾರಕಿಹೊಳಿ‌ ಡಿಸಿಎಂ‌ ಮಾಡಲು ಪಕ್ಷ ಮತ್ತು ಇತರರು ಒಪ್ಪುವುದು ಭಾರೀ ಕಷ್ಟ. ಅಲ್ಲದೇ ರಮೇಶ್ ಜಾರಕಿಹೊಳಿ ಜೊತೆಗೆ ಇರುವ ಶಾಸಕರಿಗೆಲ್ಲ ನಿಗಮ ಮಂಡಳಿಗಳಲ್ಲಿ‌ ಅವಕಾಶ ಕೊಡಲು ಸಾಧ್ಯವಿಲ್ಲ. ಹೀಗಾಗಿ ಹೇಗಾದರೂ ಮಾಡಿ ಕಾಂಗ್ರೆಸ್​ನಿಂದ ಬಿಜೆಪಿ ಹೋಗೋ ದಾರಿಗೆ ತಂತ್ರ ಹೆಣೆದಿದ್ದಾರೆ ರಮೇಶ್​ ಎಂಬ ಸಹಜ ಅನುಮಾನ ಶುರುವಾಗಿದೆ.

Comments are closed.