ಕರ್ನಾಟಕ

ಮಳೆ ಸಂತ್ರಸ್ತರಿಗೆ ಕಾಂಗ್ರೆಸ್​ ಶಾಸಕರಿಂದ ‘ಒಂದು ತಿಂಗಳ ಸಂಬಳ: ಸಚಿವ ಜಮೀರ್ ಅಹಮ್ಮದ್​

Pinterest LinkedIn Tumblr


ಬೆಂಗಳೂರು: ಮಳೆಯ ಅಬ್ಬರಕ್ಕೆ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ಕಾಂಗ್ರೆಸ್​ ಶಾಸಕ, ಸಂಸದರ ಒಂದು ತಿಂಗಳ ಸಂಬಳ ನೀಡಲು ಮುಂದಾಗಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮ್ಮದ್​ ತಿಳಿಸಿದ್ಧಾರೆ. ​

ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಸಚಿವ ಜಮೀರ್ ಅಹ್ಮದ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತಾಡಿದ ದಿನೇಶ್​ ಗುಂಡೂರಾವ್​​, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಭೆ ಕರೆದಿದ್ರು. ಎಲ್ಲಾ ಕೆಪಿಸಿಸಿ ಅಧ್ಯಕ್ಷರು ಕಾರ್ಯಕಾರಿ ಸದಸ್ಯರ‌ ಸಭೆ ನಡೆಸಿದ್ದೇವೆ.

ಮಳೆಯಿಂದಾಗಿರುವ ಅನಾಹುತಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಕೇರಳ ಮತ್ತು ಕರ್ನಾಟಕದ ಕೆಲ ಜಿಲ್ಲೆಗಳ ಅತಿರುಷ್ಠಿಯಾಗಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳು ಸಹಾಯ ಮಾಡಬೇಕು ಅಂತಾ ಸೂಚನೆ ನೀಡಿದ್ದಾರೆ ಎಂದರು.

ಕೆಪಿಸಿಸಿ ವತಿಯಿಂದ ಜನರ ರಕ್ಷಣೆಗೆ ತಂಡ ರಚಿಸಲಾಗಿದೆ. ರಾಜ್ಯ ಸಂಸದ ಕೆ.ಸಿ ವೇಣುಗೋಪಾಲ ನೇತೃತ್ವದ ತಂಡದಲ್ಲಿ ಜಮೀರ್​ ಕೂಡಾ ತಂಡ ಸದಸ್ಯರ ಆಗಿದ್ದಾರೆ. ಕೇರಳ ಮತ್ತು ಕರ್ನಾಟಕ ಭಾಗದಲ್ಲಿ ಮಾನವೀಯ ದೃಷ್ಟಿಯಿಂದ ಸಹಾಯ ಮಾಡಲಿದ್ದೇವೆ. ಕೇಂದ್ರ ಗಂಭೀರ ಪರಿಶೀಲನೆ ಮಾಡಿ ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಇದೆ ವೇಳೆ ಮಾತಾಡಿದ ಅಚಿವ ಜಮೀರ್​, ಇದೊಂದು ರಾಷ್ಟ್ರೀಯ ದುರಂತ ಅಂತಾ ಘೋಷಣೆ ಮಾಡಿ ವಿಶೇಷ ಅನುದಾನ ನೀಡುವಂತೆ ಆಗ್ರಹ ಮಾಡ್ತೇನೆ. ಕಾಂಗ್ರೆಸ್ ಎಲ್ಲಾ ಶಾಸಕರ ಒಂದು ತಿಂಗಳ ಸಂಂಬಳ ಸಂತ್ರಸ್ತರಿಗೆ ನೀಡಲಿದ್ದೇವೆ. ಎಂದರು.

Comments are closed.