ಕರ್ನಾಟಕ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೀವ್ರ ಹೋರಾಟ: ಪ್ರಕಾಶ್‌ ರಾಜ್‌

Pinterest LinkedIn Tumblr


ಮಡಿಕೇರಿ: ಕಾವೇರಿ ನದಿ ವಿಚಾರವನ್ನಿಟ್ಟುಕೊಂಡು ಜಗಳ ಮಾಡಲು ನನಗಿಷ್ಟವಿಲ್ಲ. ಕಾವೇರಿ ನದಿಯಲ್ಲಿ ಎಷ್ಟು ನೀರಿದೆ ಎಂದು ಅರಿತುಕೊಂಡು ಎರಡು ರಾಜ್ಯಗಳು ಮುನ್ನಡೆಯಬೇಕು. ಎರಡು ತಿಂಗಳು ಸಮಯ ಕೊಡಿ ನಿಜ ಮಾಹಿತಿ ಬಹಿರಂಗ ಮಾಡುತ್ತೇನೆ ಎಂದು ನಟ ಪ್ರಕಾಶ್‌ ರಾಜ್​ ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಚುನಾವಣೆ ದೇಶದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ. ಏನೇ ಹೇಳಬೇಕಾದರೂ ಈ ಸಂದರ್ಭದಲ್ಲಿ ಹೇಳಬೇಕು. ನದಿ ತಿರುವು ಯೋಜನೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

ಜೀವಭಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಕುಟುಂಬವಿದೆ. ಹೆಂಡತಿ ಮಕ್ಕಳಿದ್ದಾರೆ. ನನಗೆ ಯಾವುದೇ ತೊಂದರೆಯಾಗದಂತೆ ಭದ್ರತಾ ಸಿಬ್ಬಂದಿ ಇಟ್ಟುಕೊಂಡಿದ್ದೇನೆ. ಕರ್ನಾಟಕದಲ್ಲಿ ಕೋಮುವಾದ ಇರಬಾರದು. ಚುನಾವಣೆಯಲ್ಲಿ ಜೆಡಿಎಸ್​ನವರು ಬಿಜೆಪಿಗೆ‌ ಮಾರಿಕೊಳ್ಳಬೇಡಿ. ಒಂದು ವೇಳೆ ಹಾಗಾದರೆ ಉಗ್ರ ಪ್ರತಿಭಟನೆ ನಡೆಸಬೇಕಾದೀತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದರು.

Comments are closed.