ಕರ್ನಾಟಕ

ಭರ್ಜರಿಯಾಗಿ ಸುರಿದ ಬೇಸಿಗೆ ಮಳೆ

Pinterest LinkedIn Tumblr


ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಕಂಡು ಬಂದ ವಾಯುಭಾರ ಕುಸಿತದ ಪರಿಣಾಮ ನಗರಕ್ಕೆ ಜೋರಾಗಿ ತಟ್ಟಿದ್ದು, ಗುರುವಾರ ಸಂಜೆ ಅನೇಕ ಪ್ರದೇಶಗಳಲ್ಲಿ ಜೋರಾದ ಮಳೆ ಸುರಿಯಿತು.

ವಾಯುಭಾರ ಕುಸಿತದ ಪರಿಣಾಮ ಕಳೆದೆರಡು ದಿನ ಸಂಜೆ ತುಂತುರು ಮಳೆ ಬಿದ್ದಿತ್ತು. ಗುರುವಾರ ಜೋರಾಗಿ ಮಳೆ ಸುರಿದಿದ್ದು, ಅನೇಕ ಪ್ರದೇಶಗಳ ಪ್ರಮುಖ ರಸ್ತೆಗಳು ಜಲಾವೃತಗೊಂಡವು. ಎರಡು ದಿನ ಮೋಡ ಕವಿದ ವಾತಾವರಣವಿದ್ದುಧಿದಧಿರಿಧಿಂದ ಮಳೆ ಬರುವ ನಿರೀಕ್ಷೆಯಿಂದ ಛತ್ರಿ ತಂದವರು ಮಳೆರಾಯನಿಂದ ಪಾರಾದರು. ಆದರೆ ರಸ್ತೆಗಳಲ್ಲಿ ಮಳೆಗೆ ಸಿಲುಕಿದ ವಾಹನ ಸವಾರರು ಒದ್ದೆಯಾಗಿ ಚಳಿಯಲ್ಲಿ ನಡುಗಿದರು.

ವಾಯುಭಾರ ಕುಸಿತದ ಪರಿಣಾಮ ಕಡಿಮೆಯಾಗುತ್ತಿದೆ. ಆದರೂ ಇನ್ನೂ ಎರಡು ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಇದೆಧಿ’ಧಿ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಮಳೆ ಸುರಿದಿರುವುದರಿಂದ ತಾಪಮಾನದಲ್ಲಿ ಸರಾಸರಿ 3 ಡಿಗ್ರಿ ಸೆಲ್ಸಿಯಸ್‌ ಇಳಿಕೆ ಕಂಡು ಬಂದಿದೆ. ಮಾರ್ಚ್‌ ಆರಂಭದಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ 34 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನವಿತ್ತು. ಮಳೆ ಬಂದ ಬಳಿಕ ತಾಪಮಾನ 32 ರಿಂದ 31 ಡಿಗ್ರಿ ಸೆಲ್ಸಿಯಸ್‌ಗೆ ಬಂದು ತಲುಪಿದೆ. ಇದರಿಂದ ಸೆಕೆ ಕಡಿಮೆಯಾಗಿದ್ದು, ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ತಂದುಕೊಟ್ಟಿದೆ.

ದಾಖಲೆ ಮಳೆ ಸಾಧ್ಯತೆ: ಮಾರ್ಚ್‌ ತಿಂಗಳಲ್ಲಿ ಸುರಿದಿರುವ ಬೇಸಿಗೆ ಮಳೆ ದಾಖಲೆಯನ್ನೂ ಸೃಷ್ಟಿಸಿರುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಮಾಹಿತಿಯಂತೆ, ಮಾರ್ಚ್‌ನಲ್ಲಿ ಹೆಚ್ಚು ಮಳೆ ಸುರಿದಿಲ್ಲ. 2017ರ ಮಾ.8 ರಂದು 36.8 ಮಿ.ಮೀ. ಮಳೆ ಸುರಿದಿದ್ದು ದಶಕದ ದಾಖಲೆಯಾಗಿತ್ತು. ಇದಕ್ಕೂ ಮುನ್ನ ಅಂದರೆ, 1981 ರ ಮಾರ್ಚ್‌ನಲ್ಲಿ 61 ಮಿ.ಮೀ. ಮಳೆ ಸುರಿದಿತ್ತು. ಈ ಬಾರಿ ಸುರಿದಿರುವ ಮಳೆಯ ಒಟ್ಟು ಪ್ರಮಾಣದ ಬಗ್ಗೆ ಹವಾಮಾನ ಇಲಾಖೆ ಇನ್ನಷ್ಟೇ ಮಾಹಿತಿ ಕಲೆಹಾಕಬೇಕಿದೆ. ಈ ಮಳೆಯ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಿದ್ದರೆ ದಶಕದ ದಾಖಲೆಯಾಗಲಿದೆ.

ಜ್ಞಾನಭಾರತಿಯಲ್ಲಿ 34 ಮಿ.ಮೀ., ಕುಮಾರಸ್ವಾಮಿ ಲೇಔಟ್‌ನಲ್ಲಿ 30 ಮಿ.ಮೀ., ಅಂಜನಾಪುರದಲ್ಲಿ 28 ಮಿ.ಮೀ., ಬೊಮ್ಮನಹಳ್ಳಿಯಲ್ಲಿ 23 ಮಿ.ಮೀ., ಉತ್ತರಹಳ್ಳಿಯಲ್ಲಿ 21 ಮಿ.ಮೀ., ಗಾಳಿ ಆಂಜನೇಯ ದೇವಸ್ಥಾನ, ವಿದ್ಯಾಪೀಠದಲ್ಲಿ 20 ಮಿ.ಮೀ., ಗೊಟ್ಟಿಗೆರೆಯಲ್ಲಿ 19 ಮಿ.ಮೀ., ಸಾರಕ್ಕಿ, ಯಲಹಂಕದಲ್ಲಿ 18 ಮಿ.ಮೀ., ಚಾಮರಾಜಪೇಟೆ, ವಿ.ವಿ.ಪುರ, ಬಸವನಗುಡಿಯಲ್ಲಿ 17 ಮಿ.ಮೀ., ಮಳೆಯಾಗಿದೆ.

ಅತ್ಯಧಿಕ ಮಳೆ

ಕೆಂಗೇರಿ- 56 ಮಿ.ಮೀ.

Comments are closed.